Wednesday, January 22, 2025
ಬೆಂಗಳೂರುರಾಜ್ಯಸುದ್ದಿ

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ: ಪ್ರವಾಸಿಗರು ಫುಲ್ ಖುಷ್..! – ಕಹಳೆನ್ಯೂಸ್

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಂದ್ರೆ ಅದು ಪ್ರಾಣಿ-ಪಕ್ಷಿ ಪ್ರಿಯರ ನೆಚ್ಚಿನ ತಾಣ. ಇದೀಗ ಪಾರ್ಕ್ ಗೆ ಹೊಸ ಅಥಿತಿಯೊಬ್ಬರ ಆಗಮನವಾಗಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸೊಬಗನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಪ್ರವಾಸಿಗರನ್ನ ತನ್ನತ್ತ ಆಕರ್ಷಿಸುತ್ತಿದೆ.

ಅಷ್ಟಕ್ಕೂ ಯಾರಪ್ಪಾ ಆ ಹೊಸ ಅಥಿತಿ ಅಂತೀರಾ ನೋಡಿ ಈ ಸ್ಟೋರಿಯಲ್ಲಿ..

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ತನ್ನ ಮುದ್ದಾದ ಸೊಂಡಲಿನಿಂದ ಎಲ್ಲರನ್ನು ಆಕರ್ಷಿಸುತ್ತಿರುವ ಮರಿಯಾನೆ. ಇನ್ನೊಂದೆಡೆ ಮರಿಯಾನೆಯನ್ನು ರಕ್ಷಣೆ ಮಾಡಿಕೊಳ್ಳುತ್ತಿರುವ ತಾಯಾನೆಯ ಗುಂಪು.
ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ ಸೀಗೆಕಟ್ಟೆ ಆನೆ ಕೇಂದ್ರದಲ್ಲಿ. ಹೌದು ಇಲ್ಲಿನ 15 ವರ್ಷದ ರೂಪಾ ಎಂಬಾ ಆನೆಯು ಮುದ್ದಾದ ಹೆಣ್ಣು ಮರಿಯಾನೆಗೆ ಜನ್ಮ ನೀಡಿದ್ದಾಳೆ. ಮರಿಯಾನೆಯ ಜನನದಿಂದ ಬನ್ನೇರುಘಟ್ಟ ಉದ್ಯಾನವನದ ಸಫಾರಿಗೆ ಬರುವ ಪ್ರವಾಸಿಗರಿಗೆ ಮರಿಯಾನೆಯನ್ನ ನೋಡುವ ಭಾಗ್ಯ ಒದಗಿದೆ. ಮಾತ್ರವಲ್ಲದೇ ಆನೆ ಮರಿ ಜನನದಿಂದ ಬನ್ನೇರುಘಟ್ಟ ಪಾರ್ಕ್ನಲ್ಲಿ ಸಂತಸ ಮನೆಮಾಡಿದ್ದು, ಆನೆಗಳ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. ತಾಯಾನೆ ಹಾಗೂ ಮರಿ ಎರಡು ಕೂಡ ಆರೋಗ್ಯವಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ಹಾಗೂ ಸಿಬ್ಬಂದಿಗಳು ಆರೈಕೆಯನ್ನ ಮಾಡುತ್ತಿದ್ದು, ಸಫಾರಿಯ ಸೀಗೆಕಟ್ಟೆ ಬಳಿ ಮರಿಯಾನೆಯನ್ನು ಕಾಣಬಹುದಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ಸೂರ್ಯ ಸೇನ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ‌ ರೂಪಾ ಆನೆಯೂ ಈ ಹಿಂದೆ ಒಂದು ಗಂಡು ಹಾಗೂ ಒಂದು ಹೆಣ್ಣಾನೆಗೆ ಜನ್ಮ ನೀಡಿತ್ತು. ಇದೀಗ ಮತ್ತೆ ಹೆಣ್ಣಾನೆಗೆ ಜನ್ಮ ನೀಡಿದೆ. ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆಯ ಆನೆ ಶಿಬಿರದಲ್ಲಿ ತಾಯಿ ಹಾಗೂ ಮರಿಯಾನೆಯನ್ನ ಕಾಣಬಹುದಾಗಿದೆ. ಈ ಪುಟಾಣಿ ಮರಿಯಾನೆಯ ತುಂಟಾಟ ಅರೆಕ್ಷಣದಲ್ಲಿ ಪ್ರವಾಸಿಗರ ಮನಸ್ಸಿನಲ್ಲೊಂದು ಆನಂದದ ಹೊನಲು ಹರಿಸುತ್ತಿದೆ. ತಾಯಾನೆಯ ಜೊತೆಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನ ಇಡುತ್ತ, ತನ್ನ ಮುದ್ದಾದ ಸೊಂಡಲಿನಿಂದ ಆನೆಗಳ ಗುಂಪಿನಲ್ಲಿ ತುಂಟಾಟ ನಡೆಸೋ ಪುಟಾಣಿ ಆನೆಯ ದೃಶ್ಯ ಕಂಡು ಪ್ರವಾಸಿಗರು ಏಂಜಾಯ್ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಪ್ರಾಣಿ ಪಕ್ಷಿ ಪ್ರೀಯರ ನೆಚ್ಚಿನ‌ ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳು ಹೆಚ್ಚು ಆಕರ್ಷಣಿಯಾವಾಗಿದ್ದು, ಇದೀಗ ಇದರ ಸೊಬಗನ್ನು ಮರಿಯಾನೆ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ನಿಮಗೂ ಮರಿಯಾನೆ ನೋಡುವ ಆಸೆ ಇದ್ರೆ ಒಮ್ಮೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿಗೆ ಭೇಟಿ ಕೊಡಿ…ಮರಿಯಾನೆ ತುಂಟಾಟ ನೋಡಿ ಎಂಜಾಯ್ ಮಾಡಿ