Wednesday, January 22, 2025
ಸುದ್ದಿ

ನಾಳೆಯಿಂದ (ಜ.03) ಗುರುಪುರ ಶ್ರೀ ವಜ್ರದೇಹಿ ಮಠದ “ವಜ್ರದೇಹಿ ಜಾತ್ರೆ” ಆರಂಭ – ಕಹಳೆ ನ್ಯೂಸ್

ಮಂಗಳೂರು : ಗುರುಪುರ ಶ್ರೀ ವಜ್ರದೇಹಿ ಮಠದ “ವಜ್ರದೇಹಿ ಜಾತ್ರೆ” ಯು ಜ.03ರಿಂದ ಜ.05ರ ವರೆಗೆ ನಡೆಯಲಿದೆ.

ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರ ಉಪಸ್ಥಿತಿ ಹಾಗೂ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಅವರ ಆಧ್ವರ್ಯುತನದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮವು ಅದ್ಧೂರಿಯಿಂದ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಗುರು ರಾಮಾಂಜನೇಯ ದೇವರ ಸನ್ನಿಧಿಯಲ್ಲಿ ವಜ್ರದೇಹಿ ಜಾತ್ರೆಯು ಬಹು ವಿಜೃಂಭಣೆಯಿಂದ ನಡೆಯಲಿದ್ದು, ಧಾರ್ಮಿಕ, ಸತ್ಸಂಗಾದಿ ಭಗವತ್ ಸೇವೆಯ ಎಲ್ಲಾ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಹಾಗೂ ಶ್ರೀ ಗುರುವರ್ಯರ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜ.03ರಿಂದ ಜ.05ರ ತನಕ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜ.05ರಂದು ಮೈಸಂದಾಯ, ರಕೇಶ್ವರಿ ಮತ್ತು ಅಣ್ಣಪ್ಪ ಧರ್ಮ ದೈವಗಳ ನೇಮೋತ್ಸವ ನಡೆಯಲಿದೆ.