Wednesday, January 22, 2025
ಸುದ್ದಿ

85 ಲಕ್ಷ ಉದ್ಯೋಗ ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಬರೆದ ಐಐಐಟಿ ವಿದ್ಯಾರ್ಥಿನಿ!

ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ನಯಾ ರಾಯ್‌ಪುರ್‌ನಲ್ಲಿ ಬಿಟೆಕ್ ವಿದ್ಯಾರ್ಥಿನಿಯಾಗಿರುವ ರಾಶಿ ಬಗ್ಗಾ, ಅವರು ವಾರ್ಷಿಕ 85 ಲಕ್ಷ ಉದ್ಯೋಗ ಪ್ಯಾಕೇಜ್ ಪಡೆದುಕೊಳ್ಳುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಯೋಗ ನಿಯೋಜನೆ ಪ್ಯಾಕೇಜ್‌ಗಳು ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿದೆ. ನೂತನ ಪದವೀಧರರಿಗೆ 1 ಕೋಟಿ ರೂ.ವರೆಗೆ ಕೂಡ ತಲುಪಿದೆ. ಇದು ಕೇವಲ ಐಐಟಿಗಳು ಮತ್ತು ಐಐಎಂಗಳಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದಕ್ಕೆ ಉದಾಹರಣೆ ಎಂದರೆ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ನಯಾ ರಾಯ್‌ಪುರ್‌ನಲ್ಲಿ (ಐಐಐಟಿ-ಎನ್‌ಆ‌ರ್) ಬಿಟೆಕ್ ವಿದ್ಯಾರ್ಥಿನಿಯಾಗಿರುವ ರಾಶಿ ಬಗ್ಗಾ ಅವರು ವಾರ್ಷಿಕ 85 ಲಕ್ಷ ಉದ್ಯೋಗ ಪ್ಯಾಕೇಜ್ ಪಡೆದುಕೊಳ್ಳುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು