Sunday, January 19, 2025
ಕಾಸರಗೋಡುದಕ್ಷಿಣ ಕನ್ನಡಪುತ್ತೂರುಸುದ್ದಿಸುಳ್ಯ

ಪುತ್ತೂರು-ಸುಳ್ಯ-ಕೇರಳ ಗಡಿಭಾಗದ ಮಂಡೆಕೋಲು, ಮೂರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ ಕೃಷಿ ನಾಶ – ಕಹಳೆ ನ್ಯೂಸ್

ಪುತ್ತೂರು, ಜ 03: ಕಾಡಾನೆಯೊಂದು ತೋಟಕ್ಕೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ಜ.3 ರಂದು ಬುಧವಾರ ಮುಂಜಾನೆ ಕುಮಾರ್ ಪೆರ್ನಾಜೆ ಎಂಬವರ ತೋಟದಲ್ಲಿ ನಡೆದಿದೆ.


ಪುತ್ತೂರು-ಸುಳ್ಯ-ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಬಂದಿರುವ ಒಂಟಿ ಸಲಗ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಡೆಕೋಲು, ಮೂರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿರುವ ಕೃಷಿ ತೋಟಗಳಿಗೆ ದಾಳಿ ನಡೆಸಿದ ಒಂಟಿ ಸಲಗ ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ಹಾನಿಗೊಳಿಸಿ ಪುನಃ ಮುಗೇರಿನ ಕಡೆಗೆ ತೆರಳಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆ ಗಿಡ , ಹಲಸು ಮರ ಹೀಗೆ ಅಪಾರ ಕೃಷಿ ನಾಶವಾಗಿದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದ್ದು, ಕೃಷಿಕರು ರಾತ್ರಿ ತೋಟಕ್ಕೆ ಹೋಗದಂತೆ ಅರಣ್ಯ ಇಲಾಖೆಯವರು ಸೂಚನೆ ನೀಡಿದ್ದಾರೆ.