Friday, September 20, 2024
ಸುದ್ದಿ

ಪ್ರೊ ಕಬಡ್ಡಿ 2018ರ 20ನೇ ಪಂದ್ಯದಲ್ಲಿ ಮುಂಬೈ ಭರ್ಜರಿ ಗೆಲುವು –

ಸೋನಿಪತ್‌: ಹರಿಯಾಣದ ಸೋನಿಪತ್‌ನಲ್ಲಿ ನಡೆದ ಪ್ರೊ ಕಬಡ್ಡಿ 2018ರ 20ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಮುಂಬೈ 42-32ರ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಮುಂಬೈ 13 ಪಾಯಿಂಟ್ಸ್ಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದೆ.

ಪಂದ್ಯಾರಂಭದಲ್ಲಿ ಹರ್ಯಾಣವೆ ಮೇಲುಗೈ ಸಾಧಿಸಿತ್ತು. ಆದರೆ ಅದಾಗಿ ಮರುಕ್ಷಣವೇ ಮುಂಬೈ ಅಂಕ ಕದಿಯಲಾರಂಭಿಸಿತು. ಮತ್ತೆ ಮುಂಬೈ ಅಂಕವನ್ನು ಬಿಟ್ಟುಕೊಡಲಿಲ್ಲ, ಮುನ್ನಡೆಯಲ್ಲೇ ಮುಂದುವರೆಯಿತು. ತವರಿನಲ್ಲಿ ನಡೆದ ಪಂದ್ಯವಾದ್ದರಿಂದ ಹರ್ಯಾಣ ಗೆಲುವಿಗಾಗಿ ಹಾತೊರೆಯಿತು ಆದ್ರೆ ಗೆಲುವು ತಂದುಕೊಳ್ಳಲಾಗಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು