Sunday, January 19, 2025
ಕ್ರೈಮ್ದಕ್ಷಿಣ ಕನ್ನಡಬೆಂಗಳೂರುಬೆಳ್ತಂಗಡಿರಾಜ್ಯಸುದ್ದಿ

ಸಾರ್ವಜನಿಕವಾಗಿ ನ್ಯಾಯಾಧೀಶರಿಗೆ ಅವ್ಯಾಚ್ಯ ನಿಂದನೆ – ಹೈಕೋರ್ಟಿನಲ್ಲಿ ತಪ್ಪೊಪ್ಪಿಕೊಂಡ ತಿಮರೋಡಿ ಪರ ವಕೀಲರು ; ಜ.05 ಪತ್ನಿ ಸಹಿತ ನ್ಯಾಯಾಲಯಕ್ಕೆ ಹಾಜರಾಗಲು ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೈಕೋರ್ಟು ಮತ್ತೆ ಗರಂ ಆದ ಘಟನೆ ನಡೆದಿದೆ. ನ್ಯಾಯಾಂಗ ನಿಂದನೆ ಅರ್ಜಿ ಸಂಬಂದಿಸಿದಂತೆ
ಹೈ ಕೋರ್ಟು 2020 ಆದೇಶ ಮಾಡಿದ ನ್ಯಾಯ ಮೂರ್ತಿಗಳನ್ನು ಅವ್ಯಚ್ಯಾವಾಗಿ ನಿಂದಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ನಡತೆ ಬಗ್ಗೆ ತಿಮರೋಡಿ ಪರ ವಕೀಲರು ಹೈ ಕೋರ್ಟಿನಲ್ಲಿ ಇಂದು ತಿಮರೋಡಿ ಆ ಹೇಳಿಕೆ ಸರಿಯಲ್ಲ ಮತ್ತು ಈ ಬಗ್ಗೆ ಅವರಿಗೆ ಈ ರೀತಿ ಮಾಡದಂತೆ ತಿಳಿ ಹೇಳುವುದಾಗಿ ನ್ಯಾಯಾಲಯದ ಜವಾಬ್ದಾರಿ ನ್ಯಾಯವಾದಿಯಾಗಿ ಹೇಳಿಕೆಯನ್ನು ನೀಡಿರುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಅವರನ್ನು ನ್ಯಾಯಾಲಯದ ಮುಂದೆ ಇದೇ ಜನವರಿ 05 ತಾರೀಖಿನಂದು ಕುದ್ದು ಹಾಜರಾಗಲು ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿಗೆ ಹೈ ಕೋರ್ಟ್ ಆದೇಶ ಮಾಡಿದೆ. ಹಿರಿಯ ನ್ಯಾಯ ಮೂರ್ತಿಗಳಾದ ಪಿ.ಎಸ್.‌ ದಿನೇಶ್ ಕುಮಾರ್ ಹಾಗೂ ಟಿ. ಜಿ. ಶಿವಶಂಕರೇ ಗೌಡ ಅವರ ನ್ಯಾಯಪೀಠ ಆದೇಶ ಮಾಡಿದೆ.

ದೂರು ದಾರದ ಪರ ಖ್ಯಾತ ಹಿರಿಯ ನ್ಯಾಯವಾದಿಗಳಾದ ಚಂದ್ರನಾಥ ಆರಿಗಾ ಅವರು ವಾದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು