ಉಡುಪಿ : ಕುಂದಾಪುರ ಪರಿಸರದ ಬಸ್ ನಿಲ್ದಾಣದ ಬಳಿ ಅರೆಪ್ರಜ್ಞಾ ಸ್ಥಿತಿಯಲ್ಲಿ ಕಂಡುಬಂದ ಯುವತಿಯನ್ನು ಪೋಲೀಸ್ ಠಾಣಾ ಸಿಬ್ಬಂದಿಗಳು ರಕ್ಷಿಸಿ ತದನಂತರ ಸಮಾಜ ಸೇವಕರಾದ ಶ್ರೀ ನಿತ್ಯಾನಂದ ಒಳಕಾಡು ಅವರ ಸಹಕಾರದೊಂದಿಗೆ ಸಖಿ ಒನ್ ಸ್ಟಾಪ್ ಸೆಂಟರ್ ಗೆ ದಾಖಲಿಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಕುಂದಾಪುರ ಬಸ್ ನಿಲ್ದಾಣದ ಸಮೀಪ ತಡರಾತ್ರಿ ಯುವತಿಯೋರ್ವಳು ಅರೆಪ್ರಜ್ಞಾ ಸ್ಥಿತಿಯಲ್ಲಿ ಕಂಡು ಬಂದಿದ್ದು, ಯುವತಿ ಈ ಮೊದಲು ಸರಕಾರಿ ಆಸ್ಪತ್ರೆ ಕುಂದಾಪುರ ಇಲ್ಲಿ ಚಿಕಿತ್ಸೆ ಪಡೆದಿದ್ದಳು, ಅಲ್ಲಿಂದ ಆಕೆ ಹೇಳದೆ ಕೇಳದೆ ಪರಾರಿಯಾಗಿದ್ದು , ನಂತರ ಕುಂದಾಪುರ ಬಸ್ ನಿಲ್ದಾಣದಲ್ಲಿ ಅಸ್ವಸ್ಥ ಹಾಗೂ ಆರೆಪ್ರಜ್ಞಾ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದನ್ನು ಗಮನಿಸಿದ ಕುಂದಾಪುರ ಪೊಲೀಸ್ ಠಾಣೆಯ ಪಿ. ಎಸ್. ಐ ವಿನಯ್ ಕೊರ್ಲಹಳ್ಳಿ ಮತ್ತು ಸಿಬ್ಬಂದಿಗಳು ರಕ್ಷಿಸಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ತಿಳಿಸಿದರು. ಆ ತಕ್ಷಣವೇ ಸ್ಪಂದಿಸಿದ ಸಮಾಜ ಸೇವಕರಾದ ಶ್ರೀ ನಿತ್ಯಾನಂದ ಒಳಕಾಡು ಇವರು ಉಚಿತ ಅಂಬುಲೆನ್ಸ್ ವ್ಯವಸ್ಥೆಯ ಮೂಲಕ ತುರ್ತಾಗಿ ಸಖಿ ಒನ್ ಸ್ಟಾಪ್ ಸೆಂಟರ್ ಗೆ ಕರೆತರಲಾಯಿತು, ಆದರೆ ಯುವತಿ ಅಸ್ವಸ್ಥ ಹಾಗೂ ಅರಿಪ್ರಜ್ಞಾ ಸ್ಥಿತಿಯಲ್ಲಿದ್ದ ಕಾರಣ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿ ಆಕೆಯ ಸ್ಥಿತಿ ಸ್ಥಿರ ಆದ ನಂತರ ಪುನಃ ಸಖಿ ಸೆಂಟರ್ ಗೆ ದಾಖಲಿಸಲಾಯಿತು.
ರಕ್ಷಿಸಲ್ಪಟ್ಟ ಯುವತಿಯು ಶಿವಮೊಗ್ಗ ಮೂಲದ ಬಾಳೆಹೊನ್ನೂರಿನ ಶೃತಿ ಎಂಬವರು 22 ವರ್ಷ ವಯಸ್ಸು ಎಂಬುದಾಗಿ ತಿಳಿದು ಬಂದಿದ್ದು ಸಂಬಂಧಿಕರು ಸಖಿ ಒನ್ ಸ್ಟಾಪ್ ಸೆಂಟರ್ ಅನ್ನು ಸಂಪರ್ಕಿಸಬೇಕಾಗಿ ಈ ಮೂಲಕ ಸೂಚಿಸಲಾಗಿದೆ.