Sunday, January 19, 2025
ಸುದ್ದಿ

ಉಡುಪಿ : ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಪ್ರಯಾಣಿಕರ ತಂಗುದಾಣ ಕುಡುಕರ ಅಡ್ಡೆ…!! – ಕಹಳೆ ನ್ಯೂಸ್

ಉಡುಪಿ : ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಬಸ್ಸು ನಿಲ್ದಾಣವೊಂದು, ಕುಡುಕರ ಅಡ್ಡೆಯಾಗಿದ್ದು, ಪೊದೆಯಿಂದ ಆವರಿಸಿಕೊಂಡು ಭೀತಿ ಹುಟ್ಟಿಸುವ ಸ್ಥಿತಿಯಲ್ಲಿದ್ದು, ಪ್ರಯಾಣಿಕರ ತಂಗುದಾಣವು ಮೂಲ ಸ್ಥಿತಿಯನ್ನು ಕಳೆದುಕೊಂಡು ಪಳವಳಿಕೆ ಮಾತ್ರ ಉಳಿದಿದೆ. ತಕ್ಷಣ ನಗರಸಭೆ ಈ ಬಸ್ಸು ನಿಲ್ದಾಣವನ್ನು ಪುರ್ನನಿರ್ಮಾಣ ಮಾಡಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರುವರು ಆಗ್ರಹಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಯೋಗ್ಯ ಸ್ಥಿತಿಯಲ್ಲಿರುವ ನಿಲ್ದಾಣವನ್ನು ಸಾರ್ವಜನಿಕರು ಬಳಸಲಾಗದೆ, ಬಿಸಿಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಕುಡುಕರ ಹಾವಳಿಯಿಂದ ಇಲ್ಲಿ ಭೀತಿಯ ವಾತವರಣ ಸೃಷ್ಟಿಯಾಗಿದೆ. ಸನಿಹದಲ್ಲಿ ಸಖಿ ಓನ್ ಸೆಂಟರ್, ರಾಜ್ಯ ಮಹಿಳಾ ನಿಲಯಗಳಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.