Wednesday, January 22, 2025
ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ) ಬಂಟ್ವಾಳ ವತಿಯಿಂದ ಸಜೀಪಮೂಡ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಟ್ಯೂಶನ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್ 

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ.) ಬಂಟ್ವಾಳ ತಾಲೂಕು. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪಾಣೆಮಂಗಳೂರು ವಲಯದ ವತಿಯಿಂದ ಟ್ಯೂಶನ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಸಜೀಪಮೂಡದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಣೆಮಂಗಳೂರು ವಲಯ ಒಕ್ಕೂಟಗಳ ವಲಯಅಧ್ಯಕ್ಷರಾದ ಗಂಗಾಧರ ಭಂಡಾರಿ ವಹಿಸಿದ್ದು, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಕಾರ್ಯಕ್ರಮದ ಬಗ್ಗೆ ಹಾಗೂ ಯೋಜನೆಯಲ್ಲಿ ಶಿಕ್ಷಣಕ್ಕೆ ಸಿಗುವಂತ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಸಜೀಪಮೂಡ ಒಕ್ಕೂಟ ಅಧ್ಯಕ್ಷೆ ಹರೀಣಾಕ್ಷಿ ಶಾಲಾ ಶಿಕ್ಷಕ ಗಣೇಶ, ಅತಿಥಿ ಶಿಕ್ಷಕಿ ಹೇಮಾವತಿ ಉಪಸ್ಥಿತರಿದ್ದರು.

ಮೂರು ತಿಂಗಳು ಟ್ಯೂಷನ್ ಕ್ಲಾಸ್ ನಡೆಯಲಿದ್ದು, ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ,ಸೇವಾ ಪ್ರತಿನಿಧಿ ಬಬಿತ ಸ್ವಾಗತಿಸಿ, ಶಿಕ್ಷಕಿ ಸುಲೋಚನಾ ವಂದಿಸಿ, ವಲಯ ಮೇಲ್ವಿಚಾರಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು.