Thursday, January 23, 2025
ಸುದ್ದಿ

ಕಟಪಾಡಿ ; ರೋಟರಿ ಕ್ಲಬ್ ಮತ್ತು ಎಸ್ .ವಿ ಎಸ್ ಶಾಲಾ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಮೌಲ್ಯಾಧಾರಿತ ಶಿಕ್ಷಣ ಕಾರ್ಯಗಾರ – ಕಹಳೆ ನ್ಯೂಸ್

ಕಟಪಾಡಿ : ಎಸ್. ವಿ .ಎಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಆಸು ಪಾಸಿನ ಆಯ್ದ ಶಾಲಾ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಒಪ್ಪಿಗೆಯ ಮೇರೆಗೆ ಸಂಪನ್ಮೂಲ ವ್ಯಕ್ತಿ ಸನ್ಮಾನ್ಯ ಶ್ರೀ ಮುನಿರಾಜ ರೇಂಜಾಳ- ನಿವೃತ್ತ ಶಿಕ್ಷಕರು, ಜೈನ ಪ್ರೌಢಶಾಲೆ, ಕಾರ್ಕಳ -ಇವರಿಂದ ಮೌಲ್ಯಾಧಾರಿತ ಶಿಕ್ಷಣದ ಕುರಿತು ಕಾರ್ಯಾಗಾರ ಕಟಪಾಡಿ ರೋಟರಿ ಕ್ಲಬ್ ಮತ್ತು ಎಸ್ .ವಿ ಎಸ್ ಶಾಲಾ ಆಡಳಿತ ಮಂಡಳಿಯ ಸಹಯೋಗದೊಂದಿಗೆ ನಡೆಯಿತು.


ಕ್ಲಬ್ ಅಧ್ಯಕ್ಷ ರೆuಟಿಜeಜಿiಟಿeಜ.ರಿತೇಶ್ ಬಿ ಕೋಟ್ಯಾನ್ ಎಲ್ಲರನ್ನು ಸ್ವಾಗತಿಸಿದರು .ಎಸ್ ವಿ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆuಟಿಜeಜಿiಟಿeಜ. ಸತ್ಯೇಂದ್ರ ಪೈ ಅವರು ವೇದಿಕೆಯಲ್ಲಿದ್ದ ಗಣ್ಯರ ಜೊತೆಗೂಡಿ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮುನಿ ರಾಜ ರೆಂಜಾಳ -ಶಿಕ್ಷಕರ ಹೊಣೆಗಾರಿಕೆಯನ್ನು ನಿದರ್ಶನಗಳೊಂದಿಗೆ ತಿಳಿಸಿ, ದೇಶದ ಗುಣಮಟ್ಟವು ಶಿಕ್ಷಕರ ಗುಣಮಟ್ಟವನ್ನು ಅವಲಂಬಿಸಿದೆ .ಶಿಕ್ಷಕರ ಸುಧಾರಣೆಯಾದರೆ ದೇಶ ಖಂಡಿತ ಸುಧಾರಣೆಯಾಗಬಹುದು ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಎಸ್ವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ರೇಣುಕ ಇವರಿಗೆ ನೇಶನ್ ಬಿಲ್ಡರ್ ಪದ ಪ್ರದಾನ ಮಾಡಲಾಯಿತು. ರೊ. ಗಣೇಶ್ ಕಿಣಿಯವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ವೇದಿಕೆಯಲ್ಲಿ ಮೌಲ್ಯಧಾರಿತ ಶಿಕ್ಷಣದ ಜಿಲ್ಲಾ ಉಪ ಸಭಾಪತಿ ರೆuಟಿಜeಜಿiಟಿeಜ. ಶ್ರೀಕರನ್ ಅಂಚನ್ ,ನಿಯೋಜಿತ ಸಹಾಯಕ ಗವರ್ನರ್  ಜಗನ್ನಾಥ ಕೋಟೆ ,. ಶಂಕರ್ ಪೂಜಾರಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಆಸು ಪಾಸಿನ ಸುಮಾರು 17 ಶಾಲೆಗಳ ಪ್ರಾಥಮಿಕದಿಂದ ಪಿಯುಸಿವರೆಗಿನ ಶಿಕ್ಷಕರು ಹಾಗೂ ಎಸ್ .ವಿ .ಎಸ್ ಸಮೂಹ ಶಿಕ್ಷಣ ಸಂಸ್ಥೆ ಗಳ ಮುಖ್ಯಸ್ಥರುಗಳಾದ ಶ್ರೀಯುತ ಸುಬ್ರಹ್ಮಣ್ಯ ತಂತ್ರಿ ದೇವೇಂದ್ರ ನಾಯಕ, ಶ್ವೇತಾ ಶೆಟ್ಟಿ, ಭಾಸ್ಕರ್ ಕಾಮತ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು