Thursday, January 23, 2025
ಸುದ್ದಿ

ಜ. 22 ರಾಮಮಂದಿರ ಉದ್ಘಾಟನೆ ; ಅಯೋಧ್ಯೆಯಲ್ಲಿ ಟೈಟ್ ಸೆಕ್ಯುರಿಟಿ ; ನಗರ ಪೂರ್ತಿ ಸಿಸಿಟಿವಿ ಕಣ್ಗಾವಲು – ಕಹಳೆ ನ್ಯೂಸ್

ಉತ್ತರ ಪ್ರದೇಶ : ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ಸಮಾರಂಭ ನಡೆಯಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗ್ತಿದೆ. ಇದರ ಭಾಗವಾಗಿ ಉತ್ತರ ಪ್ರದೇಶ ನಗರದಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ಭದ್ರತೆಗಾಗಿ ಅಯೋಧ್ಯೆಯ ಮುಖ್ಯದ್ವಾರಗಳಲ್ಲಿ ಸಿಸಿಟಿವಿ ಕಣ್ಗಾವಲಿರಲಿವೆ. ಈ ಮಹಾ ಸಮಾರಂಭದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗುವ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಿ ಕೆಲಸ ಮಾಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆಯಲ್ಲಿ ಸ್ಕ್ಯಾನರ್ ಅಳವಡಿಸಲಾಗಿರುತ್ತದೆ. ರಸ್ತೆಯಲ್ಲಿ ವಾಹನ ಚಲಿಸಿದಾಗ ತಕ್ಷಣವೇ ಅದನ್ನ ಸ್ಕ್ಯಾನ್ ಮಾಡಿ ಚೆಕ್ ಮಾಡಲಾಗುತ್ತದೆ. ಮತ್ತು ರಸ್ತೆ ಬದಿಯ ಎತ್ತರ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗಿರುತ್ತದೆ. ಇದಕ್ಕಾಗಿಯೇ ಹಳದಿ ವಲಯ ಮತ್ತು ಕೆಂಪು ವಲಯಗಳಲ್ಲಿ ಕಮಾಂಡ್ ಕಂಟ್ರೋಲ್ ಕೇಂದ್ರ ಮಾಡಲಾಗಿದೆ. ಇದು ಇಡೀ ನಗರದಲ್ಲೆಲ್ಲಾ ಅಳವಡಿಸಲಾಗಿರುವ ಕ್ಯಾಮೆರಾಗಳ ಫೀಡ್ ಅನ್ನು ಸಂಗ್ರಹಿಸಿ ಕೊಡಲಿದೆ.