Recent Posts

Monday, January 20, 2025
ಸುದ್ದಿ

ರಾಮಮಂದಿರ ಲೋಕಾರ್ಪಣಾ ಬ್ಯಾನರ್ ಹರಿದ ಕಿಡಿಗೇಡಿಗಳು : ಎಸ್ಪಿಗೆ ಕರೆ ಮಾಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್

ಸುಳ್ಯ :ಸುಳ್ಯ ಪೇಟೆಯಲ್ಲಿ ಹಾಕಲಾಗಿರುವ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯವರನ್ನ ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ, ಅಯೋಧ್ಯೆ ರಾಮಮಂದಿರ ಹಾಗೂ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಅದರಲ್ಲಿ ನಡುವಿನಲ್ಲಿದ್ದ ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯವನ್ನು ಯಾರೋ ಕಿಡಿಗೇಡಿಗಳು ರಾತ್ರಿ ಹರಿದು ಹಾಕಿದ್ದಾರೆ. ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸಂಸದ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಅವರಿಗೆ ಕರೆ ಮಾಡಿ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.