Monday, November 25, 2024
ಸುದ್ದಿ

ಸುಮಾರು 9 ವರ್ಷ ಹಿಂದೆ ನಡೆದಿದೆ ಎನ್ನಲಾದ ಅಕ್ರಮ ಮದ್ಯ ಮಾರಾಟ ಪ್ರಕರಣ: ಆರೋಪಿ ಖುಲಾಸೆ – ಕಹಳೆ ನ್ಯೂಸ್

ಪುತ್ತೂರು: ಅಕ್ರಮ ಮಧ್ಯ ಮಾರಾಟ ಮಾಡಿದ್ದಾರೇ ಎನ್ನಲಾದ ಪ್ರಕರಣದ ಆರೋಪಿ ಆಶೋಕ್ ಸುವರ್ಣ ರವರನ್ನು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಸದ್ರಿ ಪ್ರಕರಣದಿಂದ ಖುಲಾಸೆ ಮಾಡಿರುತ್ತದೆ.

ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ನ್ಯೂ ಜನತಾ ಕಾಲೋನಿಯಲ್ಲಿರುವ ಆಶೋಕ್ ಸುವರ್ಣ ಎಂಬವರಿಗೆ ಸೇರಿದ ಮನೆಯ ಒಳಗಡೆ ಅಡಿಗೆ ಕೋಣೆಯಲ್ಲಿ 2 ಗುಂಡಿಗಳನ್ನು ತೆಗೆದು ಅದರ ಒಳಗೆ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಇಟ್ಟು ಟೈಲ್ಸ್ ಮುಚ್ಚಿರುವುದನ್ನು ಹಾಗೂ ನೈಲಾನ್ ಚೀಲದಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟಿರುವುದನ್ನು ಪತ್ತೆ ಹಚ್ಚಿದ್ದು, ಸೊತ್ತುಗಳನ್ನು ವಶಕ್ಕೆ ತೆಗೆದೆಕೊಂಡು ಈ ನಿಟ್ಟಿನಲ್ಲಿ ದೂರು ದಾಖಲಿಸಿಕೊ0ಡ ಅಬಕಾರಿ ಪೊಲೀಸರು ಆಶೋಕ್ ಸುವರ್ಣರವರನ್ನು ಬ0ಧಿಸಿದ್ದರು ಹಾಗೂ ಅವರ ಮೇಲೆ ಕೇಸು ದಾಖಲಿಸಿದ್ದರು ಹಾಗೂ ನ್ಯಾಯಾಲಯಕ್ಕೆ ಅ0ತಿಮ ವರದಿಯನ್ನು ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಿರುವಲ್ಲಿ ನ್ಯಾಯಾಲಯವು ಈ ಪ್ರಕರಣವನ್ನು ಹ0ತ ಹ0ತವಾಗಿ ತನಿಖೆಗೆ ಕೈಗೆತ್ತಿಕೊ0ಡು ಹಾಗೂ ಪ್ರೋಸಿಕ್ಯೂಷನ್ ಸುಮಾರು 7 ಸಾಕ್ಷಿಗಳನ್ನು ತನಿಖೆ ನಡೆಸಿ ಮತ್ತು 8 ದಾಖಲೆಗಳನ್ನು ಹಾಗೂ ಸುಮಾರು 27 ಮುದ್ದೆ ಮಾಲುಗಳನ್ನು ಪರಿಶೀಲಿಸಿ, ಪ್ರೋಸಿಕ್ಯೂಷನ್ ಈ ಪ್ರಕರಣವನ್ನು ಸ0ಶಯಾತೀತವಾಗಿ ಸಾಭೀತುಪಡಿಸಲು ವಿಫಲವಾಗಿದೆ ಎ0ದೂ ತೀರ್ಮಾನಿಸಿ, ಆರೋಪಿಯನ್ನು ನಿರಪರಾದಿಯೆಂದು ಬಿಡೂಗಡೆಗೊಳಿಸಲು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧಿಶರಾದ ಶ್ರೀಯುತ ಶಿವಣ್ಣ ಹೆಚ್ ಆರ್ ರವರು ಆದೇಶಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಯ ಪರವಾಗಿ ಹಿರಿಯ ವಕೀಲರಾದ ಕಜೆ ಲಾ ಚೇಂಬರ್ಸ್ನ ಶ್ರೀ.ಮಹೇಶ್ ಕಜೆಯವರು ವಾದಿಸಿದ್ದರು