ಮಾದಕ ದ್ರವ್ಯವ್ಯಸನದ ವಿರುದ್ಧ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ಮತ್ತು ಜಾಗೃತಿ – ಕಹಳೆ ನ್ಯೂಸ್
ಕಾಪು : ಕಾರ್ಕಳ ಪೊಲೀಸ್ ಉಪವಿಭಾಗ ಇವರ ನೇತೃತ್ವದಲ್ಲಿ ಕಾಪು ವೃತ್ತ ವ್ಯಾಪ್ತಿಯ ಕಾಪು, ಪಡುಬಿದ್ರಿ ಮತ್ತು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ವ್ಯಸನದ ವಿರುದ್ಧ ಜಾಗೃತಿ ಅಭಿಯಾನದ ಪ್ರಯುಕ್ತ ಶುಕ್ರವಾರ ಕಾಪು ಮಾರಿಗುಡಿ ಬಳಿಯಿಂದ ಆರಂಭಗೊAಡ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಆವರಣದ ವರೆಗೆ ಬಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳನ್ನೊಳಗೊಂಡು ನಡೆಸ ಲಾದ ಜಾಥಾ ಮತ್ತು ಅಭಿಯಾನಕ್ಕೆ ಕಾರ್ಕಳ ವೃತ್ತ ವಿಭಾಗದ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿ ಅವರು ಚಾಲನೆ ನೀಡಿ, ಮಾದಕ ದ್ರವ್ಯ ವ್ಯಸನ ಮುಕ್ತ ಸುದ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರ ಪಾತ್ರದ ಬಗ್ಗೆ ಮಾಹಿತಿ ಸಂದೇಶ ನೀಡಿದರು.
ಇಡೀ ಮಾನವ ನ ಬದುಕಿ ಗೆ ಮತ್ತು ಭವಿಷ್ಯ ಕ್ಕೆ ಹಾನಿ ಯಾಗು ತ್ತಿರುವ ಈ ಪಿಡುಗು ಇದರ ಬಗ್ಗೆ ಇಡಿ ಸಮಾಜ ಎಚ್ಚತ್ತು ಕೊಂಡು ನಿವಾರಣಾ ಗೆ ಪ್ರಯತ್ನ ಮಾಡಬೇಕು ಎಂದರು.
ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಕಾಪು ಪೊಲೀಸ್ ಉಪ ನಿರೀಕ್ಷಕ ಅಬ್ದುಲ್ ಖಾದರ್, ಕೈಂ ಎಸ್ಸೆ ಪುರುಷೋತ್ತಮ್, ಪಡುಬಿದ್ರಿ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಕುಮಾರ್, ಕೈಂ ಎಸ್ಟ್, ಸುದರ್ಶನ್ ದೊಡ್ಡಮನಿ, ಶಿರ್ವ ಪೊಲೀಸ್ ಉಪನಿರೀಕ್ಷಕ ಶಕ್ತಿವೇಲು, ಕೈಂ ಎಸ್ಸೆ ಅನಿಲ್ ಕುಮಾರ್ ಭಾಗವಹಿಸಿದ್ದರು.
ಇನ್ನಂಜೆ ಎಸ್‌ವಿಎಚ್ ಪದವಿಪೂರ್ವಕಾಲೇಜು, ಕಾಪು ಸರಕಾರಿ ಪದವಿಪೂರ್ವ ಕಾಲೇಜು ಪೊಲಿಪು, ದಂಡತೀರ್ಥ ಸಮೂಹ ಸಂಸ್ಥೆಯ ಸೌಟ್ ಮತ್ತು ಗೈಡ್ಸ್ ಮಹಾದೇವಿ ಪ್ರೌಢಶಾಲೆ ಮತ್ತು ವಿದ್ಯಾ ಆ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ 300ಕ್ಕೂ ಅಧಿಕ ವಿದ್ಯಾರ್ಥಿಗಳು, ಕಟಪಾಡಿ ಲಯನ್ಸ್ ಕ್ಲಬ್‌ನ ಸದಸ್ಯರು, ವಿವಿಧ ಸಂಘ-ಸAಸ್ಥೆಗಳ ಪ್ರತಿನಿಧಿಗಳು – ಜಾಥಾದಲ್ಲಿ ಪಾಲ್ಗೊಂಡಿದ್ದರು