ಬಂಟ್ವಾಳ : ಜ. 7 (ನಾಳೆ) ಶ್ರೀ ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.)ಮಾರುತಿನಗರ ಪಾಣೆಮಂಗಳೂರಿನಲ್ಲಿನೂತನವಾಗಿ ನಿರ್ಮಿಸಿದ ವ್ಯಾಯಮಶಾಲೆ ಹಾಗೂ ಸಭಾಭವನ ಲೋಕಾರ್ಪಣೆ – ಕಹಳೆ ನ್ಯೂಸ್
ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.)ಮಾರುತಿನಗರ ನರಿಕೊಂಬು ಪಾಣೆಮಂಗಳೂರು ವತಿಯಿಂದ ನೂತನವಾಗಿ ನಿರ್ಮಿಸಿದ ವ್ಯಾಯಮಶಾಲೆ ಹಾಗೂ ಸಭಾಭವನ ಲೋಕಾರ್ಪಣೆ ನಾಳೆ ಆದಿತ್ಯವಾರ ವೇದಮೂರ್ತಿ ರಾಜಗೋಪಾಲಾಚಾರ್ಯ ನರಿಕೊಂಬು ರವರ ಪೌರೋಹಿತ್ಯದಲ್ಲಿ ನಡೆಯಲಿದ್ದು ವ್ಯಾಯಮಶಾಲೆಯ ಉದ್ಘಾಟನೆ ಹಾಗೂ ಆಶೀರ್ವಾಚನ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾಡಲಿದ್ದು, ಸಭಾಭವನದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರಿನ ಅಧ್ಯಕ್ಷರಾದ ಪ್ರಭಾಕರ ಭಟ್ ಕಲ್ಲಡ್ಕ ನೆರೆವೇರಿಸಲಿದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ವಹಿಸಿಲಿರುವರು. ಈ ಸಂದರ್ಭದಲ್ಲಿ ಎರಕಳ ದಿವಂಗತ ಬಿ ಗಣೇಶ ಸೋಮಯಾಜಿ ವೇದಿಕೆ ಯಾರಕಳ ಕುಟುಂಸ್ಥರಿAದ ಅನಾವರಣ ಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ರಮಾನಾಥ ರೈ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಲೋಟಸ್ ಗ್ರೂಪ್ ಮಂಗಳೂರುನ ಜಿತೇ0ದ್ರ ಎಸ್ ಕೊಟ್ಟಾರಿ, ವೇದಮೂರ್ತಿ ಜನಾರ್ಧನ ವಾಸುದೇವ ಭಟ್ ಮೊಗರ್ನಾಡು ,ಜಗನಾಥ್ ಬಂಗೇರ ನಿರ್ಮಾಲ್, ಪ್ರಕಾಶ್ ಕಾರಂತ್ ನರಿಕೊಂಬು, ಕೃಷ್ಣನಂದ ಮಾಣಿಮಜಲ್, ಪದ್ಮನಾಭ ಮಯ್ಯ, ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾದವ ಗೌಡ, ಹರೀಶ್ ಪುತ್ರೂಟ್ಟಿಬೈಲು, ಪಂಚಾಯತ್ ಸದಸ್ಯರುಗಳಾದ ಪ್ರಕಾಶ್ ಕೋಡಿಮಜಲು, ಶುಭ ಶಶಿಧರ್,ಮೊದಲಾದವರು ಭಾಗವಹಿಸಲಿರುವರು ಸಭಾ ಕಾರ್ಯಕ್ರಮದ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಕಲಿರುವುದು ಎಂದು ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.)ಮಾರುತಿನಗರ ನರಿಕೊಂಬು ಅಧ್ಯಕ್ಷ ಚಂದ್ರಹಾಸ ಕೋಡಿಮಜಲು ತಿಳಿಸಿರುತಾರೆ.