ಪುತ್ತೂರು : ಪುತ್ತೂರ್ದ ಬಂಟ ಜವನರೆ ಗೊಬ್ಬು ಕಾರ್ಯಕ್ರಮ ; ಕಬಕದಲ್ಲಿ ಬೃಹತ್ ಅಂತರ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ : ಶಾಸಕರಾದ ಅಶೋಕ್ ರೈ – ಕಹಳೆ ನ್ಯೂಸ್
ಪುತ್ತೂರು: ಕಬಕದಲ್ಲಿ 24 ಎಕ್ರೆ ಜಾಗದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದ್ದು 25 ಕೋಟಿ ರೂ. ಅನುದಾನ ಸ್ಟೇಡಿಯಂ ನಿರ್ಮಾಣಕ್ಕೆಸಿಗಲಿದ್ದು ಎರಡು ವರ್ಷದಲ್ಲಿ ಸ್ಟೇಡಿಯಂ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಬಂಟ ವಿವಿಧ ಸಂಘಟನೆಗಳ ಒಕ್ಕೂಟದಿಂದ ನಡೆದ ಬಂಟ ಜವನೆರೆ ಗೊಬ್ಬು ಕಾರ್ಯಕ್ರಮದಲ್ಲಿಮಾತನಾಡಿದರು.
ಕಬಕದಲ್ಲಿ ಎರಡು ಸ್ಟೇಡಿಯಂ ನಿರ್ಮಾಣವಾಗಲಿದ್ದು ಒಂದು ಸ್ಟೇಡಿಯಂ ಕ್ಷೇತ್ರದ ಕ್ರಿಕೆಟ್ ಆಟಗಾರರಿಗೆ ನಿತ್ಯ ಆಡಲು ನೀಡಲಾಗುವುದು ಎಂದು ಹೇಳಿದರು.
ಬಂಟ ಸಮುದಾಯಜಗತ್ತಿನಲ್ಲೇ ಪಸರಿಸಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಬಂಟ ಸಮುದಾಯಕ್ಕೆ ಸರಕಾರದಿಂದ ಯಾವುದೇ ಸಹಾಯ ಹಸ್ತ ದೊರೆಯುತ್ತಿರಲಿಲ್ಲ. ಕಾಂಗ್ರೆಸ್ ಸರಕಾರ ಬಂದ ಬಳಿಕ ಬಂಟ ನಿಗಮದ ಕನಸು ಚಿಗುರಿದೆ.ಮುಂದಿನ ಬಜೆಟ್ ನಲ್ಲಿ ಬಂಟರ ನಿಗಮಕ್ಕೆ ಸ್ಥಾಪನೆಯಾಗಲಿದೆ. ಬಂಟ ಸಮಾಜದಲ್ಲಿರುವ ಬಡವರನ್ನು ಗುರುತಿಸಿ ಅವರಿಗೆ ಸಹಕಾರ ನೀಡುವ ಕೆಲಸವನ್ನು ಮಾಡಬೇಕಿದೆ.ವರ್ಷಕ್ಕೆ ಒಂದು ಬಂಟರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಇದಕ್ಕಾಗಿ ಸಮಾಜದ ಎಲ್ಲರೂ ಒಟ್ಟಾಗಬೇಕು ಎಂದು ಹೇಳಿದರು.
ಎಲ್ಲಾ ಸಮಾಜದವರೊಂದಿಗೆ ಒಟ್ಟು ಸೇರುವ ಸಮುದಾಯ ಬಂಟ ಸಮುದಾಯವಾಗಿದೆ.ಸಮಾಜದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಉತ್ತೇಜನ ನೀಡುವ ಮೂಲಕ ಕ್ರೀಡೆ ಹಾಗೂ ವಿದ್ಯೆಯಲ್ಲೂ ಅವರನ್ನು ನಾವು ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಲಕ್ಷ್ಮೀ ನಾರಾಯಣ ರೈ ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ,ನಿಹಾಲ್ ಶೆಟ್ಟಿ, ದುರ್ಗಾಪ್ರಸಾದ್ ರೈ, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ಶಿವರಾಮ್ ಆಳ್ವ ಬಳ್ಳಮಜಲು, ಸತೀಶ್ ಶೆಟ್ಟಿ, ಶಶಿರಾಜ್ ರೈ, ರಂಜಿನಿ ಶೆಟ್ಟಿ, ಶುಭ ರೈ, ಕೆಸಿ ಅಶೋಕ್ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ದಯಾನಂದ ರೈ ಕೊರ್ಮಂಡ, ಸಂದೇಶ್ ಶೆಟ್ಟಿ, ಪ್ರಜ್ವಲ್ ರೈ ಪಾತಾಜೆ, ಕಾರ್ತಿಕ್ ರೈ, ವತ್ಸಲಾ ಪದ್ಮನಾಭ ಶೆಟ್ಟಿ, ಅನುಶ್ರೀ, ಮಾಧವಿ ಮನೋಹರ್ ರೈ, ಪೂರ್ಣಿಮಾ ಅನ್ನಪೂರ್ಣ ರಾಜೀವ್ ರೈ ಕುತ್ಯಾಡಿ, ಮಲ್ಲಿಕಾ ಜೆ ರೈ, ಮಮತಾ ಶೆಟ್ಟಿ ಉಪಸ್ಥಿತರಿದ್ದರು.