Sunday, November 24, 2024
ಸುದ್ದಿ

ಪುತ್ತೂರು ನಗರ ವ್ಯಾಪ್ತಿಗೆ 24 ಕೋಟಿ ರೂ ಅನುದಾನ ; ದೂರ ದೃಷ್ಟಿಯಲ್ಲಿ ನಡೆಯಲಿದೆ ನಗರದ  ಕಾಮಗಾರಿಗಳು: ಅಶೋಕ್ ರೈ

ಪುತ್ತೂರು: ಪುತ್ತೂರು ನಗರ ವ್ಯಾಪ್ತಿಯಲ್ಲಿ ರೂ 24 ಕೋಟಿ ರೂ ಕಾಮಗಾರಿ ನಡೆಯಲಿದ್ದು ಇದಕ್ಕಾಗಿ ವಿವಿಧ ಕಡೆಗಳಿಗೆ ಅನುದಾನ ಹಂಚಿಕೆ ಕೆಲಸ ನಡೆದಿದ್ದು ಮುಂದಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ನನಡೆಯಲಿದ್ದು ದೂರ ದೃಷ್ಟಿಯ ಕಾಮಗಾರಿಗಳು ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಅವರು ಮರೀಲ್ ಬೆದ್ರಾಳ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಪುತ್ತೂರು ನಗರಕ್ಕೆ 24 ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1010 ಕೋಟಿ ರಊ ಅನುದಾನ ಬಿಡುಗಡೆಯಾಗಿದ್ದು ಮುಂದಿನ ಒಂದೂವರೆ ವರ್ಷದೊಳಗೆ ಗ್ರಾಮೀಣ ಭಾಗದಲ್ಲೂ ದಿನದ 24 ಗಂಠೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.
ಕೆಎಂಎಫ್ ಪುತ್ತೂರಿಗೆ ಶಿಫ್ಟ್ ಆಗಲಿದ್ದು ಇದರಿಂದ ಇಲ್ಲಿನ ಸುಮಾರು 600 ಮಂದಿಗೆ ಉದ್ಯೋಗ ದೊರೆಯಲಿದೆ. ಯುವಕರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡಬೇಕು. ಪುತ್ತೂರಿನಲ್ಲಿ ಉದ್ಯಮ ಆರಂಭವಾದರೆ ಎಲ್ಲರಿಗೂ ಆದಾಯ ಬರಲಿದೆ. ಆಟೋ ಚಾಲಕರಿಗೆ, ಲರಿ ಚಾಲಕರಿಗೆ ಸೇರಿದಂತೆ ವಿದ್ಯಾವಂತ ನಿರುದ್ಯೋಗಿಗಳಿಗೂ ಉದ್ಯೋಗಕವಾಶ ದೊರೆಯಲಿದೆ. ಪಕ್ಷಾತೀತವಾಗಿ ಪುತ್ತೂರಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ನಡೆಸುತ್ತೇನೆ. ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಖಂಡಿತವಾಗಿಯೂ ಮಾಡುವುದಿಲ್ಲ. ಪುತ್ತೂರಿನ ಜನತೆಯ ಕ್ಷೇಮವೇ ನನ್ನ ಕ್ಷೇಮವಾಗಿದೆ, ನನ್ನ ಕ್ಷೇತ್ರದಲ್ಲಿ ಸೂರು, ನೀರು, ಮತ್ತು ಕರೆಂಟ್ ಇಲ್ಲದೆ ವಂಚಿತರಾಗಿರುವ ಯವುದೇ ಕುಟುಂಬ ಇರಬಾರದು, ಯಾವ ಕುಟುಂಬವೂ ಹಸಿವಿನಿಂದ ಇರಬಾರದು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.
ಬೆದ್ರಾಳದಿಂದ ಸರ್ವೆ ತನಕ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ ಈ ವಿಚಾರಕ್ಕೆ ಸಂಬAಧಿಸಿAದAತೆ ಈಗಾಗಲೇ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಶಾಸಕರು ಹೇಳಿದರು. ಸರಕಾರ ಐದು ಗ್ಯಾರಂಟಿಯನ್ನು ನೀಡಿ ಪ್ರತೀ ಕುಟುಂಬಕ್ಕೂ ನೆರವಾಗಿದೆ, ಎಲ್ಲರ ಖಾತೆಗೂ ಹಣ ಜಮೆಯಾಗುತ್ತಿದೆ, ಕಾಂಗ್ರೆಸ್ ಸರಕಾರ ಬಂದ ಬಳಿಕ ಜನತೆ ನೆಮ್ಮದಿಯಿಂದ ಇದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಕಾಂಗ್ರೆಸ್ ಸರಕಾರ ಬಂದ ಬಳಿಕ ಕೊಂಚ ನೆಮ್ಮದಿ ದೊರಕಿದೆ. ಮುಂದಿನ ದಿನಗಳಲ್ಲಿ ಅಭಿವೃದ್ದಿಗೂ ಸರಕಾರ ಹೆಚ್ಚಿನ ಅನುದಾನವನ್ನು ನೀಡಲಿದೆ ಎಂದು ಶಾಸಕರು ಹೇಳಿದರು.
ಇದೇ ಸಂದರ್ಭದಲ್ಲಿ ಆರ್ಯಾಪು ಕೃಷಿಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಮಹಮ್ಮದಾಲಿ ಹಗೂ ನೂತನ ನಿರ್ದೆಶಕರುಗಳಾಗಿ ಆಯ್ಕೆಯಾದ ರಂಜಿತ್ ಬಂಗೇರ ಹಾಗೂ ತೆರೆಸಾ ಎಂ ಸಿಕ್ವೆರಾ ಅವರನ್ನು ಶಾಸಕರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಈಶ್ವರಭಟ್ ಪಂಜಿಗುಡ್ಡೆ, ಕಾಂಗ್ರೆಸ್ ಮುಖಂಡರುಗಳಾದ ಶಿವರಾಮ ಆಳ್ವ ಬಳ್ಳಮಜಲು, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಯಾಕೂಬ್ ಮುಲಾರ್, ರೆಝಾಕ್ ಖಾನ್, ಹೆರಾಲ್ಡ್ ಮಾಡ್ತಾ, ಇಬ್ರಾಹಿಂ ಟಿ ಎಂ, ಲಿಯೋ ಮರ‍್ಟಿಸ್,ದಿನೇಶ್, ಬೆನ್ನಿ ಡಿಸೋಜ, ತೆರೆಸಾ ಸಿಕ್ವೆರಾ, ಬೂತ್ ಅಧ್ಯಕ್ಷ ಜೀವನ್ ಮರ್ವಿನ್ ಡೆಲ್ಮೆದಾ, ಆರ್ಯಾಪು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ರಂಜಿತ್ ಬಂಗೇರ, ಮರೀಲ್ ರಿಕ್ಷಾ ಚಾಲಕರ ಸಂಘದ ಪಧಾಧಿಕಾರಿಗಳು ಹಗೂ ಸ್ಥಳೀಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು