Sunday, November 24, 2024
ಸುದ್ದಿ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ವಿತರಿಸುವ ಅಭಿಯಾನದಲ್ಲಿ ಪಾಲ್ಗೊಂಡ ವಜ್ರೇಶ್ವರಿ ಅಪಾರ್ಟ್ಮೆಂಟಿನ ನಿವಾಸಿಗಳು – ಕಹಳೆ ನ್ಯೂಸ್

ದೇಶದೆಲ್ಲೆಡೆ ನಡೆಯುತ್ತಿರುವ ಅಯೋಧ್ಯೆಯ ಶ್ರೀ ರಾಮನ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸುವ ಅಭಿಯಾನದಲ್ಲಿ ಪಾಲ್ಗೊಂಡ ನಗರದ ಸೆಂಟ್ರಲ್ ವಾರ್ಡಿನ ವಿ.ಟಿ ರಸ್ತೆಯಲ್ಲಿರುವ ವಜ್ರೇಶ್ವರಿ ಅಪಾರ್ಟ್ಮೆಂಟಿನ ನಿವಾಸಿಗಳು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಿಂದ ಶ್ರೀ ರಾಮನ ಮಂತ್ರಾಕ್ಷತೆಯನ್ನು ಚಂಡೆ ವಾದ್ಯ ಕಲಶಗಳೊಂದಿಗೆ ಪೂರ್ಣಕುಂಭ ಮೆರವಣಿಗೆ ಮೂಲಕ ಭವ್ಯವಾಗಿ ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಇದೇ ವೇಳೆ ಈ ಅಪಾರ್ಟ್ಮೆಂಟಿನ ನಿವಾಸಿಗಳು ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಶಾಸಕ ವೇದವ್ಯಾಸ್ ಕಾಮತ್ ಅವರು ಮಾತನಾಡಿ 500 ವರ್ಷಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿರುವುದು ನಮ್ಮೆಲ್ಲರ ಪಾಲಿನ ಜೀವಿತಾವಧಿಯ ಭಾಗ್ಯ” ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜನವರಿ 22ನೇ ತಾರೀಕು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಭಜನೆ, ರಾಮನಾಮ ಸ್ಮರಣೆ ಹಾಗೂ ಉತ್ತರ ದಿಕ್ಕಿಗೆ ಆರತಿಯನ್ನು ಬೆಳಗಿಸುವ ಮೂಲಕ, ಮಾನ್ಯ ಪ್ರಧಾನಿ ಮೋದಿಯವರ ಆಶಯದಂತೆ ದೀಪಾವಳಿ ಹಬ್ಬದ ವಾತಾವರಣವನ್ನು ಸೃಷ್ಟಿಸಿ ರಾಮ ಕಾರ್ಯದಲ್ಲಿ ಭಾಗವಹಿಸೋಣ ಎಂದು ಶಾಸಕರು ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಮನವಿ ಮಾಡಿದರು.
ವಜ್ರೇಶ್ವರಿ ಅಪಾರ್ಟ್ಮೆಂಟಿನ ನಿವಾಸಿಗಳು ಶ್ರೀ ರಾಮನ ಮಂತ್ರಾಕ್ಷತೆಯನ್ನು ಬಹಳ ಅದ್ದೂರಿಯಾಗಿ ಬರಮಾಡಿಕೊಳ್ಳುವ ಮೂಲಕ ನಗರದ ಇನ್ನಿತರ ಹಲವು ಅಪಾರ್ಟ್ಮೆಂಟ್ ಗಳಿಗೂ ಮಾದರಿಯಾಗಿದ್ದಾರೆ ಎಂದು ಶಾಸಕರು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಮ. ನ. ಪಾ ಸದಸ್ಯೆ ಪೂರ್ಣಿಮಾ, ಜಗದೀಶ್ ಶೇನವ, ರವಿಶಂಕರ್ ಮಿಜಾರ್, ವೇಣುಗೋಪಾಲ್ ಶೆಣೈ, ಹಾಗೂ ವಜ್ರೇಶ್ವರಿ ಅಪಾರ್ಟ್ಮೆಂಟ್ ನ ಎಲ್ಲ ಪದಾಧಿಕಾರಿಗಳ ಸಹಿತ ಸೆಂಟ್ರಲ್ ವಾರ್ಡಿನ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.