Wednesday, January 22, 2025
ಸುದ್ದಿ

ಉಡುಪಿ ಅಯೊದ್ಯೆ ನೇರ ರೈಲಿಗಾಗಿ ಕರಾವಳಿ ರೈಲ್ವೆ ಹಿತರಕ್ಷಣಾ ಒಕ್ಕೂಟದಿಂದ ಪೇಜಾವರ ಶ್ರೀಗಳಿಗೆ ಮನವಿ

ಶ್ರೀ ರಾಮ ಜನ್ಮಭೂಮಿ ಮತ್ತು ಕರಾವಳಿಯ ಉಡುಪಿ ಕುಂದಾಪುರ ನಡುವೆ ನೇರ ರೈಲು ಆರಂಭಿಸಲು ಸಚಿವರಿಗೆ ಸೂಚಿಸುವಂತೆ ಕೋರಿ ಕರಾವಳಿಯ ರೈಲ್ವೆಹಿತರಕ್ಷಣಾ ಒಕ್ಕೂಟ ಮನವಿ ಸಲ್ಲಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೂ ಹಾಗು ರಾಷ್ಟ್ರದ ಸಂತ ಪ್ರಮುಖರೂ ಆದ ಶ್ರಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಯವರು ಮನವಿ ಸ್ವೀಕರಿಸಿ , ಈ ಬಗ್ಗೆ ತಕ್ಷಣವೇ ಸಚಿವರಿಗೆ ಪತ್ರ ಬರೆಯುವ ಜತೆ ದೂರವಾಣಿ ಮೂಲಕವೂ ಸೂಚಿಸುವುದಾಗಿ ತಿಳಿಸಿದರು.

ಈಗಾಗಲೇ ದೇಶ ನೂರು ಸ್ಥಳಗಳಿಂದ ಅಯೋದ್ಯೆಗೆ ರೈಲು ಸೇವೆ ಆರಂಭಿಸಿಲು ರೈಲ್ವೇ ಸಚಿವಾಲಯ ಆದೇಶಿಸಿದ್ದು , ಮೈಸೂರು ,ಹುಬ್ಬಳ್ಳಿ ,ಕನ್ಯಾಕುಮಾರಿ , ಬೆಂಗಳೂರು ಇತ್ಯಾದಿ ಕಡೆಗಳಿಂದ ರೈಲು ಆರಂಭಕ್ಕೆ ಈಗಾಗಲೇ ಸಿದ್ದತೆಗಳು ಅಂತಿಮವಾಗಿದೆ.

ಈ ಹಿನ್ನೆಲೆಯಲ್ಲಿ, ಅಯೋದ್ಯೆ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡ ಹಾಗು ಕಾಶಿ,ಪ್ರಯಾಗ್,ಅಯೋದ್ಯೆಗೆ ನಿರಂತರ ಬೇಟಿ ನೀಡುವ ಕರಾವಳಿಯ ಭಕ್ತ ಸಮೂಹಕಗಕೆ ನೇರ ರೈಲು ಸೇವೆ ಆರಂಭಿಸುವಂತೆ ಶ್ರೀಗಳನ್ನು ಕೋರಲಾಯಿತು .

ಕರಾವಳಿ ರೈಲ್ವೇ ಒಕ್ಕೂಟದ ಪರವಾಗಿಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅದ್ಯಕ್ಷ ಶ್ರೀ ಗಣೇಶ್ ಪುತ್ರನ್ ,ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಮುಖಂಡರಾದ ಶ್ರಿ ಪ್ರೆಮಾನಂದ ಶೆಟ್ಟಿ ಕಟ್ಕೇರಿ,ವಾಸುದೇವ ಭಟ್ ಪೆರಂಪಳ್ಳಿ,ಬಾರ್ಕೂರು ರೈಲುಹಿತರಕ್ಷಣಾ ಸಮಿತಿಯ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ,ರೈಲ್ವೆ ಹೋರಾಟ ಸಮಿತಿಯ ಗೌತಮ್ ಶೆಟ್ಟಿ ಕುಂದಾಪುರ, ಹನೆಹಳ್ಳಿ ಗ್ರಾಮಪಂಚಾಯತ್ ಉಪಾದ್ಯಕ್ಷರಾದ ಚಂದ್ರಮರಕಾಲ ಕೂರಾಡಿ,ಪ್ರಮುಖರಾದ,ಬ್ರಹ್ಮಾವರ ಗ್ರಾಮಾಂತರ ಬಿಜೆಪಿ ಪ್ರಧಾನಕಾರ್ಯದರ್ಶಿ ಸಚಿನ್ ಪೂಜಾರಿ ಬ್ರಹ್ಮಾವರ, ಪುನೀತ್ ಬಂಡಾರಿ ಬ್ರಹ್ಮಾವರ ಉಪಸ್ಥಿತರಿದ್ದರು.