Wednesday, January 22, 2025
ಸುದ್ದಿ

ಬಂಟ್ವಾಳ : ಜ. 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆ ಹಿನ್ನೆಲೆ ; ಪ್ರತಿ ಗ್ರಾಮದಲ್ಲಿ ಮಂತ್ರಾಕ್ಷತೆ ಪ್ರಸಾದ ವಿತರಣ ಕಾರ್ಯ – ಕಹಳೆ ನ್ಯೂಸ್

ಬಂಟ್ವಾಳ : ಜ. 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಪ್ರತಿ ಗ್ರಾಮದಲ್ಲಿ ಮಂತ್ರಾಕ್ಷತೆ ಪ್ರಸಾದ ವಿತರಿಸುವ ಕಾರ್ಯ ಭರದಿಂದ ಸಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗಂಜಿಮಠ ತೆಂಕೆಎಡಪದವು ಗ್ರಾಮದಲ್ಲಿ ನೂರಾರು ಕಾರ್ಯಕರ್ತರ ಜೊತೆ ಸಾಗಿ ಮನೆಮನೆಗೆ ಮಂತ್ರಾಕ್ಷತೆ ಪ್ರಸಾದ ವಿತರಿಸಿದರು.
ಅನೇಕ ವರುಷಗಳ ಕನಸು ನನಸಾಗುತ್ತಿದೆ, ಹಿರಿಯರ ಹೋರಾಟಗಳಿಗೆ ಗೌರವ ಸಿಕ್ಕ ಕ್ಷಣವಾಗಿದ್ದು, ಪ್ರತಿ ಮನೆಯಲ್ಲಿ ಮಂತ್ರಾಕ್ಷತೆ ಸ್ವೀಕರಿಸಿ ಸಂಭ್ರಮಪಡುತ್ತಿದ್ದಾರೆ. ಇಡೀ ದೇಶವೇ ಸಂಭ್ರಮವನ್ನು ಆಚರಿಸಲು ಎದುರು ನೋಡುತ್ತಿದ್ದು, ನಮ್ಮ ಕಾಲದಲ್ಲಿ ರಾಮನ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.
ಆಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಇಡೀ ದೇಶವೇ ಸಂಭ್ರಮಪಡುತ್ತಿದ್ದು, ಬಂಟ್ವಾಳ ತಾಲೂಕಿನ ಗ್ರಾಮಗ್ರಾಮಗಳಲ್ಲಿ ಶ್ರೀರಾಮನ ಹವಾ ಹೆಚ್ಚಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಶ್ರೀರಾಮನ ಬಗ್ಗೆ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಕುರಿತು ಮಹತ್ತರವಾದ ಯೋಜನೆಗಳು ಸಿದ್ಧವಾಗಿದೆ.
ಜ.22 ರಂದು ಅಯೋಧ್ಯೆಯಲ್ಲಿ ಪ್ರತಿಷ್ಟಾಪನೆ ನಡೆಯುತ್ತಿದ್ದರೆ ಇಲ್ಲಿ ಪ್ರತಿ ಮನೆಯಲ್ಲಿ ದೀಪ ಹಚ್ಚುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.500 ವರ್ಷಗಳ ಇತಿಹಾಸದ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲಿ ಕನಿಷ್ಟ 5 ದೀಪವನ್ನು ಉರಿಸಲು ನಿರ್ಧಾರ ಮಾಡಲಾಗಿದೆ.
ಅಯೋಧ್ಯೆಯಲ್ಲಿ ಜ.22 ರಂದು 12.59ಕ್ಕೆ ಶುಭಮುಹೂರ್ತದಲ್ಲಿ ಪ್ರತಿಷ್ಟಾಪನೆ ನಡೆಯುತ್ತಿದ್ದರೆ ತಾಲೂಕಿನ ಪ್ರತಿ ಗ್ರಾಮದ ಕೇಂದ್ರಗಳಲ್ಲಿ ಸಂತಸದ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಎಲ್.ಇ.ಡಿ.ಆಳವಡಿಸಿ ನೇರ ವೀಕ್ಷಣೆಗೆ ಅವಕಾಶ ಮಾಡಲಾಗುತ್ತದೆ ಎಂದುಆಯೋಧ್ಯೆ ಪ್ರತಿಷ್ಟಾಪನೆ ಸಂಬAಧಿಸಿದ ಸಮಿತಿಯ ಗ್ರಾಮಾಂತರ ಜಿಲ್ಲಾ ಸಹಸಂಚಾಲಕ ಪ್ರಸಾದ್ ಕುಮಾರ್ ತಿಳಿಸಿದ್ದಾರೆ.
ಅ ದಿನ ಬೆಳಿಗ್ಗೆ ಗ್ರಾಮದ ದೇವಸ್ಥಾನಗಳಲ್ಲಿ ಸೇರುವುದು ಮತ್ತು ರಾಮತಾರಕ ಜಪಯಜ್ಞದಲ್ಲಿ ಪಾಲ್ಗೊಳ್ಳುವುದು ಅ ಬಳಿಕ ಐದು ನಿಮಿಷಗಳ ಕಾಲ ಪ್ರಮುಖರೋರ್ವರು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಪ್ರತಿ ಮನೆಯಲ್ಲಿ ಸಂಜೆ ವೇಳೆ 108 ಬಾರಿ ರಾಮನಾಮ ಪಠಣ ಮಾಡಲು ಆರಂಭವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು