Thursday, January 23, 2025
ಸುದ್ದಿ

ಜನರ ಬದುಕಿನ ಜೀವ ಜಲದ ಖಜಾನೆ ಕಿಂಡಿ ಆಣೆಕಟ್ಟುಗಳು : ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್

ಕೃಷಿ ಕಾರ್ಯಗಳಿಗೆ ಚೇತನವಾಗಿರುವ ಕಿಂಡಿ ಆಣೆಕಟ್ಟುಗಳು ಅಂತರ್ಜಲ ಮಟ್ಟ ಏರಿಸುವುದರಿಂದ ಕುಡಿಯುವ ನೀರಿಗೂ ಸಹಕಾರಿಯಾಗಿವೆ. ರೈತನಿಗೆ ಹಸಿರಿನ ಉಸಿರಾಗಿ ಪ್ರಾಕ್ರತಿಕ ಚೆಲುವಾಗಿ ಮನುಷ್ಯ ಪ್ರಾಣಿ ಜಲಚರ ಗಳಿಗೆ ಅಮೃತ ಸಂಜೀವಿನಿಯಾಗಿ ನಿಜವಾಗಲೂ ಎಲ್ಲರ ಬದುಕಿನ ಜೀವಜಲದ ಖಜಾನೆಗಳು ಈ ಕಿಂಡಿ ಆಣೆಕಟ್ಟುಗಳು ಎಂದು ಪಡುಪೆರಾರ್ ನಾಲದೆ ಎಂಬಲ್ಲಿ ನಳಿನಿ ಹೊಳೆಗೆ ಅಡ್ಡಲಾಗಿ ಕಟ್ಟಲಾಗಿರುವ ಸುಮಾರು 1 ಕೋಟಿ 40 ಲಕ್ಷದ ಕಿಂಡಿ ಆಣೆಕಟ್ಟು ಉದ್ಘಾಟನೆ ಹಾಗೂ ನಮೋ ನಳಿನಿ ಕಾರ್ಯಕ್ರಮ ಉದ್ಘಾಟಿಸಿ, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ |ಭರತ್ ಶೆಟ್ಟಿ ನುಡಿದರು.. ಗ್ರಾಮಾಂತರ ಪ್ರದೇಶಗಳು ಹಸಿರಿನಿಂದ ನಳನಳಿಸಿ ರೈತರ ಶ್ರಮದಿಂದ ದೇಶದ ಜನರ ಹಸಿವಿಗೆ ವರದಾನವಾಗಿವೆ. ಯುವಜನತೆ ಕೃಷಿಯತ್ತ ಆಕರ್ಷಿತರಾಗಲು ನೀರಿನ ಕೊರತೆ ನೀಗಬೇಕು. ಇಂತಹ ಕಿಂಡಿ ಆಣೆಕಟ್ಟುಗಳ ನಿರ್ಮಾಣದಿಂದ ಇದು ಸಾಧ್ಯ. ಪೆರಾರದಂತ ಕೃಷಿ ಪ್ರದಾನ್ಯದ ಕ್ಷೇತ್ರದಲ್ಲಿ ಸಾಧ್ಯವಾಗಿರುವುದು ಖುಷಿ ತಂದಿದೆ. ರೈತಾಪಿ ಜನರ ಮೊಗದಲ್ಲಿ ನಗು ಕಂಡರೆ ದೇಶದ ಜನರು ನಗುವಿನಿಂದ ಇರಲು ಸಾಧ್ಯ.ಸ್ವಚ್ಛತೆಯ ಮೂಲಕ ಈ ಜಲನಿಧಿಯನ್ನು ಉಳಿಸಬೇಕಿದೆ ಎಂದು ಹೇಳಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದಎಡಪದವು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜನಾರ್ದನ ಗೌಡರು, ಪಡುಪೆರಾರ್ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಹರಿಯುವ ನಳಿನಿ ಹೊಳೆಗೆ 2021-22 ಸಾಲಿನಲ್ಲಿ ಕಟ್ಟಲ್ತಾಯ ಬಳಿ, ನಾಲದೆ, ಕುಡುಮಕಟ್ಟಾ, ಕೊಳಪಿಲ, ಮಾಗಂದಡಿ, ಲಕ್ಕೆ ಅಳಕೆ, ಹೀಗೇ 6 ಆಣೆಕಟ್ಟು ಶಾಸಕ ಡಾ. ಭರತ್ ಶೆಟ್ಟಿಯವರ ಪ್ರಯತ್ನದ ಫಲ, ಇದೊಂದು ಮಹಾಸಾಧನೆ ಎಂದರು. ಸಭೆಯಲ್ಲಿಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಕೋಟ್ಯಾನ್, ವಿದ್ಯಾ ಜೋಗಿ ಶ್ರೀ ಕ್ಷೇತ್ರ ಪೆರಾರದ ಬಲವಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ, ನಾರಾಯಣ ಪೆಜ್ಜತ್ತಾಯ,ಪ್ರಭಾಕರ ಪೆಜತ್ತಾಯ ಶೇಖರ್ ಸಫಲಿಗ, ಶರತ್ ಶೆಟ್ಟಿ, ಹರಿಪ್ರಸಾದ್,, ಸಚಿನ್, ವಿನ್ಸ್ಸೆಂಟ್ , ಚಂದ್ರ ಪೂಜಾರಿ, ಅಣ್ಣಿಆನಂದ ಹಿತೇಶ್ ಗಾಣಿಗ ಮುಂತಾದವರು ಉಪಸ್ಥಿತರಿದ್ದರು. ಸುನಿಲ್ ಪೆರಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು