Thursday, January 23, 2025
ಸುದ್ದಿ

ಬಾಳ್ತಿಲ ಗ್ರಾಮ ಪಂಚಾಯತ್ ನಲ್ಲಿ ವಿಕಾಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮ ಪಂಚಾಯತ್ ನ ಸುವರ್ಣ ಸೌಧ ಸಭಾಂಗಣ ದಲ್ಲಿ ದಿನಾಂಕ 09/01/2023 ರಂದು ವಿಕಾಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಬಿ.ಕೆ. ಅಣ್ಣು ಪೂಜಾರಿ ಗೆಜ್ಜೆಗಿರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಬಿ. ಕೆ. ಅಣ್ಣು ಪೂಜಾರಿ, ಶ್ರೀಮತಿ ರಂಜಿನಿ ಎಸ್ ಉಪಾಧ್ಯಕ್ಷರು, ಶ್ರೀಯುತ ಮುಕುಲ್ ಜೈನ್ ಐ.ಎ. ಎಸ್ ಪ್ರೊಬೇಷನರಿ ಅಧಿಕಾರಿ (ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ),ಶ್ರೀಮತಿ ಸಂಧ್ಯಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶ್ರೀಮತಿ ಸುರೇಖ ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಮಲ್ಲಿಕಾ, ಶ್ರೀಮತಿ ಮಮತ, ಕು. ಹಿರಾನ್ಮಯಿ, ಶ್ರೀ ವಿಠಲ್ ನಾಯ್ಕ್. ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ಶ್ರೀಮತಿ ಸರಸ್ವತಿ, ಕೃಷಿ ಇಲಾಖೆಯ ಹನುಮಂತ, ಎಸ್. ಸಿ ಕೋಳೂರಗಿ ಜಾನುವಾರ ಅಧಿಕಾರಿ ಪಶು ಆಸ್ಪತ್ರೆ ಕಲ್ಲಡ್ಕ, ಧೀರಜ್ ಶೆಟ್ಟಿ ಮ್ಯಾನೇಜರ್ ಬ್ಯಾಂಕ್ ಆಫ್ ಬರೋಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಶ್ರೀಮತಿ ಲೀಲಾವತಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಭಾಗವಹಿಸಿದರು. ಕಾರ್ಯಕ್ರಮದಲ್ಲಿ ದಾಸಕೋಡಿ ಅಂಗನವಾಡಿ ಕೇಂದ್ರದ ಪುಟಾಣಿಗಳ ಕಾರ್ಯಕ್ರಮ ನಡೆಸಿದರು. ಶ್ರೀಮತಿ ಚೇತನ ಟೀಚರ್ ಕಂಠೀಕ, ಶ್ರೀಮತಿ ನಾಗರತ್ನ ಗೆಜ್ಜೆಗಿರಿ, ಕು.ನತಾಶ ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆ ಬಾಳ್ತಿಲ ಇವರಿಗೆ ಸನ್ಮಾನ ಮಾಡಲಾಯಿತು.3ಮಂದಿಗೆ ಉಜ್ವಲ ಗ್ಯಾಸ್ ವಿತರಣೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು