Friday, November 22, 2024
ಸುದ್ದಿ

ಶಬರಿಮಲೆ ರಕ್ಷಣಾ ಸಮಿತಿ 12 ಗಂಟೆಗಳ ಕಾಲ ಕೇರಳ ಬಂದ್ ಗೆ ಕರೆ – ಕಹಳೆ ನ್ಯೂಸ್

ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಷಯ ಕೇರಳದಲ್ಲಿ ಭಾರೀ ಬಿಗುವಿನ ವಾತಾವರಣಕ್ಕೆ ಕಾರಣವಾಗಿದ್ದು, ಶಬರಿಮಲೆ ರಕ್ಷಣಾ ಸಮಿತಿ 12 ಗಂಟೆಗಳ ಕಾಲ ಕೇರಳ ಬಂದ್ ಗೆ ಗುರುವಾರ ಕರೆ ನೀಡಿದೆ.

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬುಧವಾರ ಸಂಜೆಯಿಂದಲೇ ಸನ್ನಿಧಾನಂ, ಪಂಪಾ, ನೀಲಕ್ಕಲ್ ಮತ್ತು ಎಲಾವಂಗಲ್ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ.ಸೆಕ್ಷನ್ 144 (ಅಪರಾಧ ದಂಡಸಂಹಿತೆ) ಕಾಯ್ದೆ ಪ್ರಕಾರ ನಾಲ್ಕು ಪ್ರದೇಶಗಳಲ್ಲಿ ನಾಲ್ಕು ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ. ನಿನ್ನೆಯಷ್ಟೇ ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಸುಪ್ರೀಂಕೋರ್ಟ್ ಎಲ್ಲಾ ವಯೋಮಾನದ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ತೀಪರ್ ನೀಡಿತ್ತು. ಈ ಬಗ್ಗೆ ಹಿಂದೂಪರ ಸಂಘಟನೆಗಳು, ಬುಡಕಟ್ಟು ಜನರು ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಮಹಿಳಾ ಭಕ್ತರಿಗೆ ಶಬರಿಮಲೆ ಪ್ರವೇಶಿಸಲು ಅವಕಾಶ ಕೊಡಬಾರದು ಎಂದು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ತಾಳಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು