Friday, January 24, 2025
ಸುದ್ದಿ

ವಿಶ್ವಗೀತಾ ಪರ್ಯಾಯ ಮಹೋತ್ಸವ ಮೆರವಣಿಗೆಯಲ್ಲಿ ಆಕರ್ಷಣೆಯ ಕೇಂದ್ರವಾದ ಉಡುಪಿ ಸೀರೆಗಳ ಮೆರವಣಿಗೆ – ಕಹಳೆ ನ್ಯೂಸ್

ಅದ್ದೂರಿಯಾಗಿ ನೆರವೇರಿದ ಭಾವಿ ಪರ್ಯಾಯ ಪೀಠಾಧೀಶರಾದ ಪುತ್ತಿಗೆ ಶ್ರೀಗಳ ಪುರ ಪ್ರವೇಶ ಮೆರವಣಿಗೆಯಲ್ಲಿ ಪದ್ಮಶಾಲಿ / ಶೆಟ್ಟಿಗಾರ ಸಮಾಜದವರು ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಸಂಘಟಿಸಿದ ಉಡುಪಿ ಸೀರೆಗಳ ಬ್ರಾಂಡ್ ಅಂಬಾಸಿಡರ್ಸ್, ಪದ್ಮಶಾಲಿ / ಶೆಟ್ಟಿಗಾರ ಸಮಾಜ ಬಾಂಧವರು ಹಾಗೂ ನೇಕಾರರನ್ನು ಒಳಗೊಂಡ ಉಡುಪಿ ಸೀರೆಗಳ ಮೆರವಣಿಗೆ ಕಿಕ್ಕಿರಿದ ಜನಸ್ತೋಮವನ್ನು ಆಕರ್ಷಿಸಿತು. 300 ಕ್ಕೂ ಮಿಕ್ಕಿ ಮಹಿಳೆಯರು ಮತ್ತು ಪುರುಷರು ಉಡುಪಿ ಸೀರೆಗಳನ್ನು ವಿವಿಧ ಪಾರಂಪರಿಕ ಶೈಲಿಗಳಲ್ಲಿ ಧರಿಸಿ ಪುರಪ್ರವೇಶಕ್ಕೆ ಮೆರುಗು ತುಂಬಿದರು. ಪೂಜ್ಯ ಶ್ರೀಪಾದರು, ಮಠದ ದಿವಾನರು, ವ್ಯವಸ್ಥಾಪಕರು ಮತ್ತು ಸ್ವಾಗತ ಸಮಿತಿಯ ಪದಾಧಿಕಾರಿಗಳಿಂದ ಸರ್ವತ್ರ ಪ್ರಶಂಸಿಸಲ್ಪಟ್ಟಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಪದ್ಮಶಾಲಿ /ಶೆಟ್ಟಿಗಾರ ಸಮಾಜದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇಂತಹ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದ ದೇವಸ್ಥಾನಗಳ ಮೊಕೇಸರರು, ಸಂಘಟನೆಗಳ ಪ್ರಮುಖರು, ನೇಕಾರರು, ಬ್ರಾಂಡ್ ಅಂಬಾಸಿಡರ್ಸ್ ಮತ್ತು ಭಾಗವಹಿಸಿದ ಪ್ರತಿಯೊಬ್ಬರಿಗೂ, ಸಂಚಾಲಕರಾದ ಶ್ರೀ ಬಿ.ಎಚ್ ಶೆಟ್ಟಿಗಾರ್, ಸಹ ಸಂಚಾಲಕರಾದ ಶ್ರೀ ಭಾಸ್ಕರ್ ಶೆಟ್ಟಿಗಾರ್ ಚಿತ್ಪಾಡಿ, ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ, ಶ್ರೀಮತಿ ಶೋಭಾ ಜ್ಯೋತಿಪ್ರಸಾದ್ ಶೆಟ್ಟಿಗಾರ್ ಹಾಗೂ ಸಂಯೋಜಕರಾದ ಶ್ರೀಮತಿ ಮಮತಾ ರೂಪೇಶ್, ಶ್ರೀ ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ, ಶ್ರೀಮತಿ ಸ್ವಾತಿ ಕರುಣಾಕರ್ ವಕ್ವಾಡಿ, ಶ್ರೀ ಆನಂದ ಶೆಟ್ಟಿಗಾರ್ ಬೈಲೂರು, ಶ್ರೀ ಹರೀಶ್ ಶೆಟ್ಟಿಗಾರ್ ಕುತ್ಪಾಡಿ, ಶ್ರೀ ವೆಂಕಟೇಶ ಶೆಟ್ಟಿಗಾರ್ ಮಣಿಪಾಲ,ಶ್ರೀ ಗಣೇಶ್ ಶೆಟ್ಟಿಗಾರ್ ಕಲ್ಯಾಣಪುರ ಹಾಗೂ ಶ್ರಮಿಸಿದ ಹಿರಿ ಕಿರಿಯ ನೇಕಾರರು,ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮ ನಡೆಸಿ ಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು