Friday, January 24, 2025
ಸುದ್ದಿ

ಬೆಂಗಳೂರಿನ ಹರಿಶ್ಚಂದ್ರಘಾಟ್‌ನಲ್ಲಿ CEO ಸುಚನಾಳ 4ವರ್ಷದ ಮಗುವಿನ ಅಂತ್ಯಕ್ರಿಯೆ..!– ಕಹಳೆ ನ್ಯೂಸ್

ರಾಜ್ಯದಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಸಿಇಓ ತನ್ನ ಮಗುವನ್ನು ಸಾಯಿಸಿದ್ದ ಪ್ರಕರಣದಲ್ಲಿ ಇದೀಗ ಗೋವಾ ಪೊಲೀಸರು ನಾಲ್ಕು ವರ್ಷದ ಮಗುವಿನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ದೇಹವನ್ನು ನಗರದ ಹರಿಶ್ಚಂದ್ರ ಘಾಟ್‌ಗೆ ತಂದಿರುವ ಕುರಿತು ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ನಿನ್ನೆ ಸಾಯಂಕಾಲ ಮಗುವಿನ ದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ತಡರಾತ್ರಿ 1.30ಕ್ಕೆ ರಾಜಾಜಿನಗರದಲ್ಲಿರುವ ಸುಚನಾರ ಅಪಾರ್ಟ್‌ಮೆಂಟ್‌ಗೆ ಮಗುವಿನ ಕಳೇಬರವನ್ನು ತರಲಾಗಿತ್ತು. ಈ ಸಂದರ್ಭದಲ್ಲಿ ಮಗುವಿನ ತಂದೆ ಮತ್ತು ಕೆಲಸ ಸಂಬಂಧಿಕರು ಇದ್ದರು. ಇಂಡೋನೇಶ್ಯಾದ ಜಕಾರ್ತದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟರಾಮನ್‌ ಅವರು ನಿನ್ನೆ ಪೊಲೀಸರಿಂದ ವಿಷಯ ತಿಳಿದು ಬೆಂಗಳುರಿಗೆ ಬಂದಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು