Recent Posts

Sunday, January 19, 2025
ಸುದ್ದಿ

ವೃದ್ದರ ರಕ್ಷಣೆ ಮಾಡಿ ವೃದ್ದಾಶ್ರಮಕ್ಕೆ ಸೇರಿಸಿದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು – ಕಹಳೆ ನ್ಯೂಸ್

ಉಡುಪಿ : ವಯೋವೃದ್ದರೊಬ್ಬರನ್ನು ರಕ್ಷಣೆ ಮಾಡಿ ವೃದ್ದಾಶ್ರಮಕ್ಕೆ ಸೇರಿಸಿದ ಘಟನೆ ಇಂದು ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮುದ್ದೂರಿನ ರಾಜು ಎನ್ನುವವರು ಬ್ರಹ್ಮಾವರ ಬಳಿಯ ವೃದ್ದಾಶ್ರಮದಲ್ಲಿ ಅಶ್ರಯ ಪಡೆದಿದ್ದರು .

ಅರ್ಥಿಕ ಪರಿಸ್ಥಿತಿಯಿಂದ ಹದಗೆಟ್ಟ ಹಿನ್ನಲೆಯಲ್ಲಿ ಅಲ್ಲಿನ ವೃದ್ದಾಶ್ರಮ ಮುಚ್ಚುತ್ತಿರುವ ಕಾರಣ , ರಾಜು ರವರು ಅಲ್ಲಿಂದ ನಗರಕ್ಕೆ ಬಂದಿದ್ದರು. ದಿಕ್ಕು ತೋಚದೆ ನಗರದ ಹೊಟೇಲ್ ನಲ್ಲಿ ಆಶ್ರಯ ಕೇಳಿದ್ದು,ಈ ಸಂಧರ್ಭ ಹೊಟೇಲ್ ಸಿಬಂದಿಗಳು ಸಮಾಜಿಕ ಕಾರ್ಯಕರ್ತ ನಿತ್ಯ ನಂದ ಒಳಕಾಡು ಅವರನ್ನು ಸಂಪರ್ಕಿಸಿದ್ದರು.
ತಕ್ಷಣ ಅಲ್ಲಿಗೆ ತೆರಳಿದ ನಿತ್ತನಂದ ಒಳಕಾಡು,ವೃದ್ದರ ಬಗ್ಗೆ ಮಾಹಿತಿ ಪಡೆದು ಉದ್ಯಾವರದ ಹಿರಿಯ ನಾಗರಿಕರ ಕನಸಿನ ಮನೆ ಆಶ್ರಮಕ್ಕೆ ಸೇರಿಸಿದರು.
ಸಾಮಾಜಿಕ ಕಾರ್ಯಕರ್ತ ನಿತ್ಯನಂದ ಒಳಕಾಡುರವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು