Recent Posts

Sunday, January 19, 2025
ಸುದ್ದಿ

ಕುಮಾರಧಾರ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಸುಬ್ರಹ್ಮಣ್ಯದ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕುಮಾರಧಾರ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಶ್ರೀ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ದೇವರ ದರ್ಶನ ಪಡೆಯುವುದರೊಂದಿಗೆ ಪುನೀತರಾಗುತ್ತಿದ್ದಾರೆ ಭಕ್ತಾದಿಗಳು ದೂರದ ಊರಿನಿಂದ ಬೇರೆ ಬೇರೆ ಕ್ಷೇತ್ರಗಳಿಂದ ವಾಹನಗಳಲ್ಲಿ ಆಗಮಿಸುವಂತಹ ಸಂದರ್ಭಗಳಲ್ಲಿ ಮಾರ್ಗದ ಇಕ್ಕಲೆಗಳಲ್ಲಿ ಬಹಳಷ್ಟು ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲಿಗಳು, ನೀರಿನ ಕ್ಯಾನ್ ಗಳು, ಆಹಾರ ಪಟ್ಟಣಗಳನ್ನು ಎಸೆದು ಇಡೀ ಪರಿಸರವನ್ನು ಮಾಲಿನ್ಯ ಮಾಡತಕ್ಕದ್ದು ಕಂಡುಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಮನಗಂಡ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆ ಪದವು ಹಾಗೂ ಸಮಾಜ ಸೇವಾ ಟ್ರಸ್ಟ್ ನವರು ತನ್ನ ಸ್ವಯಂಸೇವಕರೊಂದಿಗೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ. ಕುಮಾರಧಾರ ಪರಿಸರಗಳಲ್ಲಿ ಇರತಕ್ಕಂತಹ ಬಾಟಲಿಗಳು, ಕಚ್ಚಾ ವಸ್ತುಗಳನ್ನು ಸ್ವಚ್ಛತೆ ಮಾಡುವುದರೊಂದಿಗೆ ಸೇವಾ ಕಾರ್ಯವನ್ನು ಕೈಗೊಂಡಿರುವರು. ಈ ಸಂದರ್ಭದಲ್ಲಿ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಜನಾರ್ಧನ್ ಗೌಡ ರವರನ್ನು ಸನ್ಮಾನಿಸಲಾಯಿತು.