Sunday, January 19, 2025
ಸುದ್ದಿ

Breaking News : ವಿಜಯದಶಮಿ ದಿನವೇ ಪ್ರಮೋದಾ ದೇವಿಯ ತಾಯಿ ವಿಧಿವಶ ; ಅರಮನೆಯಲ್ಲಿ ಸೂತಕ – ಕಹಳೆ ನ್ಯೂಸ್

ಮೈಸೂರು: ಇಂದು ಸಮಸ್ತ ನಾಡಿನ ಜನತೆಯೂ ಜಂಬೂಸವಾರಿಗೆ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ವಿಜಯದಶಮಿ ದಿನವೇ ಪ್ರಮೋದಾ ದೇವಿ ಅವರ ತಾಯಿ ವಿಧಿವಶರಾಗಿದ್ದಾರೆ.

ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ಅವರು ನಿಧನರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುಟ್ಟಚಿನ್ನಮ್ಮಣಿ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುಟ್ಟಚಿನ್ನಮ್ಮಣಿ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರಮನೆಯಲ್ಲಿ ಜಂಬೂಸವಾರಿಯ ಹಬ್ಬದ ವಾತಾವರಣ ಕಂಗೊಳಿಸುತ್ತಿತ್ತು. ಆದರೆ ಈಗ ಪುಟ್ಟಚಿನ್ನಮ್ಮಣಿ ಅವರ ಸಾವಿನಿಂದ ಅರಮನೆಯಲ್ಲಿ ಸೂತಕದ ವಾತಾವರಣ ಆವರಿಸಿಕೊಂಡಿದೆ.