ನ್ಯಾಯಾಂಗ ನಿಂದನೆ ಪ್ರಕರಣ ; ಹೈಕೋರ್ಟಿನಲ್ಲಿ ಬೇಶರತ್ತಾಗಿ ಕ್ಷಮೆಯಾಚಿಸಿದ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ..!! – ಕಹಳೆ ನ್ಯೂಸ್
ಬೆಂಗಳೂರು : ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧಿಸಿದಂತೆ, ಹೈಕೋರ್ಟಿನಲ್ಲಿ ಇಂದು ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಬೇಶರತ್ತಾಗಿ ಕ್ಷಮೆಯಾಚಿಸಿದ ಘಟನೆ ನಡೆದಿದೆ.
ಏನಿದು ಘಟನೆ…!?
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೈಕೋರ್ಟು ಮತ್ತೆ ಗರಂ ಆದ ಘಟನೆ ನಡೆದಿತ್ತು. ನ್ಯಾಯಾಂಗ ನಿಂದನೆ ಅರ್ಜಿ ಸಂಬಂದಿಸಿದಂತೆ
ಹೈ ಕೋರ್ಟು 2020 ಆದೇಶ ಮಾಡಿದ ನ್ಯಾಯ ಮೂರ್ತಿಗಳನ್ನು ಅವ್ಯಚ್ಯಾವಾಗಿ ನಿಂದಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ನಡತೆ ಬಗ್ಗೆ ತಿಮರೋಡಿ ಪರ ವಕೀಲರು ಹೈ ಕೋರ್ಟಿನಲ್ಲಿ ತಿಮರೋಡಿ ಆ ಹೇಳಿಕೆ ಸರಿಯಲ್ಲ ಮತ್ತು ಈ ಬಗ್ಗೆ ಅವರಿಗೆ ಈ ರೀತಿ ಮಾಡದಂತೆ ತಿಳಿ ಹೇಳುವುದಾಗಿ ನ್ಯಾಯಾಲಯದ ಜವಾಬ್ದಾರಿ ನ್ಯಾಯವಾದಿಯಾಗಿ ಹೇಳಿಕೆಯನ್ನು ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಅವರನ್ನು ನ್ಯಾಯಾಲಯದ ಮುಂದೆ ಇದೇ ಜನವರಿ 05 ತಾರೀಖಿನಂದು ಕುದ್ದು ಹಾಜರಾಗಲು ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿಗೆ ಹೈ ಕೋರ್ಟ್ ಆದೇಶ ಮಾಡಿತ್ತು. ಈ ಆದೇಶದಂತೆ ಆರೋಪಿ ತಿಮರೋಡಿ ಪತ್ನಿ ಸಹಿತ ಕೋರ್ಟಿಗೆ ಹಾಜರಾಗಿದ್ದನು.
ಹಿರಿಯ ನ್ಯಾಯ ಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಹಾಗೂ ಟಿ. ಜಿ. ಶಿವಶಂಕರೇ ಗೌಡ ಅವರ ನ್ಯಾಯಪೀಠ ಮುಂದಿನ ಗುರುವಾರಕ್ಕೆ ( ಜ. 11 ) ಇಂದಿಗೆ ಮರು ಹಾಜರಾತಿಗೆ ಸೂಚಿಸಿ ಆದೇಶ ಮಾಡಿತ್ತು. ಈ ಆದೇಶದಂತೆ ಇಂದು ಕೋರ್ಟಿಗೆ ಮತ್ತೆ ಆರೋಪಿ ಹಾಜರಾಗಿದ್ದ. ಈ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ದೂರುದಾರ ಪರ ವಕೀಲರು ದಾಖಲಾತಿಗಳನ್ನು ಹಾಜರುಪಡಿಸಿ, ಸೂಕ್ತ ಕ್ರಮಕ್ಕೆ ಮನವಿ ಮಾಡಿಕೊಂಡರು. ಆ ಸಂದರ್ಭದಲ್ಲಿ ಆರೋಪಿ ಮಹೇಶ್ ಶೆಟ್ಟಿ ನ್ಯಾಯಾಲಯದಲ್ಲಿ ಬೇಶರತ್ತಾಗಿ ಕ್ಷಮೆಯಾಚಿಸಿದ ಘಟನೆ ವರದಿಯಾಗಿದೆ. ಇನ್ನು ಯಾವುದೇ ರೀತಿಯಲ್ಲಿ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಹೇಳಿಕೆ ನೀಡದಂತೆ ತಿಮರೋಡಿ ಮೌಕಿಕ ಎಚ್ಚರಿಕೆಯನ್ನು ನ್ಯಾಯಪೀಠ ನೀಡಿದೆ. ಹಾಗೂ ಈ ಕುರಿತು ತಿಮರೋಡಿಗೆ ತಿಳಿಹೇಳುವುದಾಗಿ ಹೇಳಿಕೆಯನ್ನು ತಿಮರೋಡಿ ಪರ ವಕೀಲರು ನೀಡದ್ದಾರೆ. ನ್ಯಾಯಾಲಯ ಮುಂದಿನ ವಾರ ಮತ್ತೆ ತಿಮರೋಡಿ ಹಾಜರಾಗುವಂತೆ ಆದೇಶ ಮಾಡಿ, ಪ್ರಕರಣವನ್ನು ಮುಂದೂಡಿದೆ.
ದೂರು ದಾರದ ಪರ ಖ್ಯಾತ ಹಿರಿಯ ನ್ಯಾಯವಾದಿಗಳಾದ ಚಂದ್ರನಾಥ ಆರಿಗಾ ಅವರು ವಾದಿಸಿದರು.