Wednesday, January 22, 2025
ಸುದ್ದಿ

ಸ್ಟೂಡೆಂಟ್ ಫಾರ್ ಡೆವೆಲಪ್ಮೆಂಟ್ ಉಡುಪಿ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ 161ನೇ ಜನ್ಮ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿವಸ್ ಕಾರ್ಯಕ್ರಮ – ಕಹಳೆ ನ್ಯೂಸ್

ಸ್ಟೂಡೆಂಟ್ ಫಾರ್ ಡೆವೆಲಪ್ಮೆಂಟ್ ಉಡುಪಿ ಘಟಕದ ವತಿಯಿಂದ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಸಿಡಿಲ ಸಂತ ಸ್ವಾಮಿ ವಿವೇಕಾನಂದರ 161ನೇ ಜನ್ಮ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಯುವ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಾಮಾಜಿಕ ಚಿಂತಕರಾದ ಪ್ರಕಾಶ್ ಮಲ್ಪೆಯವರು ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ, ಇವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ ಮತ್ತು ಸಧೃಡ ಭಾರತವನ್ನು ನಿರ್ಮಾಣ ಮಾಡಲು ಯುವಕರೊಂದಿಗೆ ಯುವತಿಯರ ಪಾತ್ರವೂ ಮಹತ್ವಪೂರ್ಣವಾದದ್ದು ಎಂಬುದನ್ನು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕರಾದ ಡಾ| ನಿರ್ಮಲಾ ಕುಮಾರಿ, ಪ್ರಾಂಶುಪಾಲರಾದ ರಘುನಾಥ್ ಕೆ.ಎಸ್ ಇವರು ಮಾತನಾಡಿದರು ವಿದ್ಯಾರ್ಥಿನಿಯಾದ ಪ್ರಿಯಾಂಕ ಸ್ವಾಗತಿಸಿ, ಅಜಿತ್ ಜೋಗಿಯವರು ಅತಿಥಿ ಪರಿಚಯ ನಡೆಸಿದರು, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಲೋಹಿತ್ ಕರ್ಕೇರ ವಂದಿಸಿ, ವಿದ್ಯಾರ್ಥಿಯಾದ ಗಣೇಶ್ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು