Recent Posts

Sunday, January 19, 2025
ಸುದ್ದಿ

Breaking News : ಸುರತ್ಕಲ್ ಬಳಿ ಆಸಿಡ್ ತುಂಬಿದ್ದ ಟ್ಯಾಂಕರ್‌ನಲ್ಲಿ ಬಿರುಕು ; ರಸ್ತೆಯುದ್ದಕ್ಕೂ ಆವರಿಸಿದ ಬೆಂಕಿ, ದಟ್ಟ ಹೊಗೆ – ಕಹಳೆ ನ್ಯೂಸ್

ಮಂಗಳೂರು, ಅ19 : ಮಂಗಳೂರು ಕಡೆಗೆ ಉಡುಪಿಯಿಂದ ಬರುತ್ತಿದ್ದ ಆಸಿಡ್ ತುಂಬಿದ್ದ ಟ್ಯಾಂಕರ್‌ನಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ರಸ್ತೆಯುದ್ದಕ್ಕೂ ಬೆಂಕಿ, ದಟ್ಟ ಹೊಗೆ ಆವರಿಸಿದ ಘಟನೆ ನಡೆದಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಈ ಅವಘಡ ನಡೆದಿದೆ. ಟ್ಯಾಂಕರ್‌ನಲ್ಲಿ ಕಾಣಿಸಿಕೊಂಡ ಬಿರುಕು ಚಾಲಕನಿಗೆ ತಿಳಿಯದೇ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ಯಾಂಕರ್ ಬಿರುಕಿನಿಂದಾಗಿ ಆಸಿಡ್ ರಸ್ತೆಗೆ ಚೆಲ್ಲಿ ಬೆಂಕಿ ಮತ್ತು ಭಾರಿ ಹೊಗೆ ಕಾಣಿಸಿಕೊಂಡಿದೆ. ಸುರತ್ಕಲ್ ಟೋಲ್ ಗೇಟ್ ಬಳಿ ಟ್ಯಾಂಕರ್ ಬಂದಾಗ ಟೋಲ್ ಸಿಬ್ಬಂದಿಯೊಬ್ಬರು ಬೆಂಕಿಯನ್ನು ಗಮನಿಸಿದ್ದಾರೆ. ಮಧ್ಯರಾತ್ರಿ ಸಮಯವಾಗಿದ್ದರಿಂದ ರಸ್ತೆಯಲ್ಲಿ ಸಂಚಾರ ಕಡಿಮೆ ಇದ್ದುದರಿಂದ  ಆಗಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿ ಹೋಗಿದೆ.

ಆಸಿಡ್ ಮತ್ತು ಬೆಂಕಿಯಿಂದಾಗಿ ರಸ್ತೆಗೆ ಸಣ್ಣ ಪ್ರಮಾಣದ ಹಾನಿಯಾಗಿದ್ದು, ಕೂಡಲೇ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.