Recent Posts

Monday, January 20, 2025
ಸುದ್ದಿ

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯೊಂದಿಗೆ ನೆರವೇರಿದ ವಿವೇಕಾನಂದ ಜಯಂತಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು  : ವಿವೇಕಾನಂದರದ್ದು ಕೇವಲ ಒಂದು ನೋಟದಲ್ಲಿ ಸೆಳೆಯುವ ಚುಂಬಕ ಶಕ್ತಿ, ವಿಶ್ವ ಜನರ ಮನದಲ್ಲಿ ಭಾರತದ ಕುರಿತಾದ ಕೀಳರಿಮೆಯನ್ನು ಹೋಗಲಾಡಿಸಿದ ಹಿರಿಮೆ ಇವರದ್ದು. ಸನ್ಯಾಸಿಯಾಗಿದ್ದರೂ ಕೂಡ ಸಮಾಜದಿಂದ ವಿಮುಖರಾಗದೆ, ಸಮಾಜದ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದ ವಿವೇಕಾನಂದರು ಪಾಶ್ಚಾತ್ಯ ಸಂಸ್ಕೃತಿಯನ್ನು ಭೋಗ ಸಂಸ್ಕೃತಿ ಎಂದು ಸಂಬೋಧಿಸಿದರು. ಓರ್ವ ಸನ್ಯಾಸಿಗೆ ಸಮಾಜ ಸೇವೆಯ ತುಡಿತ ಹೇಗಿರಬೇಕು ಎಂಬುದನ್ನು ಇಂದಿನ ಸಾಧುಗಳು ವಿವೇಕಾನಂದರಿಂದ ಕಲಿಯಬೇಕು ಎಂದು ಖ್ಯಾತ ವಾಗ್ಮಿ ಹಾಗೂ ಅಂಕಣಕಾರ ಪ್ರಕಾಶ್ ಮಲ್ಪೆ ಹೇಳಿದರು.

ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ವತಿಯಿಂದ ಆಯೋಜಿಸಲಾದ ವಿವೇಕಾನಂದ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದರು ಸನ್ಯಾಸಿಯಾಗಿದ್ದರೂ ಭಾರತ ಮತ್ತು ಇಲ್ಲಿನ ಸಂಸ್ಕೃತಿಯ ಬಗ್ಗೆ ಟೀಕೆ ಮಾಡಿದರೆ ಅದೇ ದಾಟಿಯಲ್ಲಿ ಪ್ರತ್ಯುತ್ತರ ನೀಡುತ್ತಿದ್ದರು. ಇಲ್ಲಿನದ್ದು ಅಂತದೃಷ್ಟಿಯನ್ನು ಬಡಿದೆಚ್ಚರಿಸುವ ಸಂಸ್ಕೃತಿ ಎಂದು ಭಾರತದ ಶ್ರೇಷ್ಟತೆಯನ್ನು ಎತ್ತಿ ಹಿಡಿದವರು. ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ವಿಶೇಷವಾದ ಗೌರವವಿದೆ. ಹೆಣ್ಣನ್ನು ಪೂಜ್ಯ ಭಾವನೆಯಲ್ಲಿ ಕಂಡು ನದಿಗಳನ್ನೂ ತಾಯಿಯ ಸ್ಥಾನದಲ್ಲಿ ಪೂಜಿಸುವ ದೇಶ ನಮ್ಮದು ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಭಾರತದ ನೆಲ ಮತ್ತು ಜನರ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ದೇಶವನ್ನು ದೇವರು ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಇಂತಹ ಪರಂಪರೆ ನಮ್ಮ ದೇಶದಲ್ಲಿ ಕಾಣಬಹುದೇ ವಿನಹಃ ಬೇರೆ ಯಾವ ದೇಶಗಳಲ್ಲೂ ಕಾಣಸಿಗುವುದಿಲ್ಲ. ನಮ್ಮ ಸಂಸ್ಕೃತಿಯ ನಾಶಕ್ಕಾಗಿ ಹಲವಾರು ಪ್ರಯತ್ನಗಳು ನಡೆದಿವೆಯಾದರೂ ಇನ್ನೂ ಕೂಡ ತನ್ನ ಅಸ್ಮಿತೆಯನ್ನು ಉಳಿಸಿಕೊಂಡ ದೇಶ ನಮ್ಮ ಭಾರತ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಆಗುವುದೆಂದರೆ ನಮಗೆ ಹೆಮ್ಮೆಯ ವಿಚಾರ. ಜಗತ್ತನ್ನೇ ಉಳಿಸುವ ರಾಮರಾಜ್ಯದ ಪರಿಕಲ್ಪನೆಯನ್ನು ಜಾರಿಗೆ ತರುವ ದೃಷ್ಠಿಯಿಂದ ರಾಮಮಂದಿರ ಲೋಕಾರ್ಪಣೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಹಾಗೂ ಹೆತ್ತವರು ಉಪಸ್ಥಿತರಿದ್ದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ ಎಂ ಕೃಷ್ಣ ಭಟ್ ಸ್ವಾಗತಿಸಿ, ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ವಂದಿಸಿದರು. ಸ್ನಾತಕೋತ್ತರ ವಿಭಾಗದ ಡೀನ್ ಡಾ|| ವಿಜಯ ಸರಸ್ವತಿ ಬಿ ಹಾಗೂ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಕಾರ್ಯಕ್ರಮ ನಿರೂಪಿದರು.

ಪುನರ್ವಸು ಪುಸ್ತಕದ ಮುಖಪುಟ ಅನಾವರಣ:
ವಿವೇಕಾನಂದ ಮಹಾವಿದ್ಯಾಲಯದ ಸಹಯೋಗದೊಂದಿಗೆ ಪತ್ರಿಕೋದ್ಯಮ ವಿಭಾಗದ ವತಿಯಿಂದ ರಾಮಾಯಣದ ಆಯ್ದ ಪಾತ್ರಗಳು, ರಾಮ ಮಂದಿರ ಹೋರಾಟದ ಮಜಲುಗಳು ಹಾಗೂ ರಾಮ ಮಂದಿರ ನಿರ್ಮಾಣದ ಕುರಿತ ವಿಶೇಷ ಪುಸ್ತಕ ಪುನರ್ವಸು, ಶ್ರೀ ರಾಮ ಮಂದಿರ ಪ್ರತಿಷ್ಠಾಪನೆಯ ದಿನವಾದ ಜನವರಿ 22ರಂದು ಲೋಕಾರ್ಪಣೆಗೊಳ್ಳಲಿದೆ. ಇದರ ಮುಖಪುಟ ಅನಾವರಣವನ್ನು ವೇದಿಕೆಯಲ್ಲಿದ್ದ ಗಣ್ಯರು ನಡೆಸಿಕೊಟ್ಟರು.

ಬೆಂಗಳೂರಿನ ರಂಗ ಪುತ್ಥಳಿ ಕಲಾವಿದರಿಂದ ಬೊಂಬೆಯಾಟ:
ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ರಂಗ ಪುತ್ಥಳಿ ಬೊಂಬೆಯಾಟದ ಕಲಾವಿದರು ಸ್ವಾಮಿ ವಿವೇಕಾನಂದ ಪ್ರಸಂಗಾಧಾರಿತ ಸೂತ್ರ ಮತ್ತು ಸಲಾಕೆ ಬೊಂಬೆಯಾಟವನ್ನು ಪ್ರಸ್ತುತ ಪಡಿಸಿದರು. ಜೊತೆಗೆ ಶ್ರೀರಾಮನ ಕುರಿತ ಕಥನವು ಪ್ರದರ್ಶನಗೊಂಡಿತು.

ಬಾಲ ರಾಮ :
ಶಿಶು ಮಂದಿರದ ಪುಟಾಣಿಗಳ ಬಾಲ ರಾಮ ಹಾಗೂ ಸ್ವಾಮಿ ವಿವೇಕಾನಂದರ ವೇಷವು ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿತ್ತು.

ರಾಮಾಯಣ- ರಾಮ ಜನ್ಮ ಭೂಮಿ ಹೋರಾಟವನ್ನು ಬಿಂಬಿಸುವ ಚಿತ್ರ ಪ್ರದರ್ಶನ:
ಹಿಂದೂ ಧರ್ಮದ ಪ್ರಮುಖ ಎರಡು ಮಹಾಕಾವ್ಯಗಳಲ್ಲಿ ರಾಮಾಯಣವೂ ಒಂದು. ಕೃತಿಗಳಲ್ಲಿ ಅಚ್ಚಾಗಿರುವ ರಾಮಾಯಣದ ಸಾಮಾಜಿಕ ಮೌಲ್ಯಗಳು, ಪರಂಪರೆ, ಸಂಪ್ರದಾಯ, ವಿಚಾರಧಾರೆಗಳನ್ನು ಪಸರಿಸುವ ನಿಟ್ಟಿನಲ್ಲಿ 2024ರ ವಿವೇಕ ಜಯಂತಿಯ ವಿಶೇಷ ಆಕರ್ಷಣೆಯಾಗಿ ಭರತಖಂಡದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ರಾಮನ ಕಥಾನಕವನ್ನು ವಿವರಿಸುವ ಚಿತ್ರ ಕಲಾ ಪ್ರದರ್ಶನಕ್ಕೆ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ ಎಂ ಕೃಷ್ಣ ಭಟ್ ಚಾಲನೆ ನೀಡಿದರು.