Recent Posts

Sunday, January 19, 2025
ಸುದ್ದಿ

#MeToo ಸುಳಿಯಲ್ಲಿ ಕೇಂದ್ರ ಸಚಿವ ಸದಾನಂದಗೌಡರ ಹೆಸರು ದುರ್ಬಳಕೆ ; ಕಹಳೆ ನ್ಯೂಸ್ ಗೆ ಆರೋಪದ ಬಗ್ಗೆ ಡಿವಿಎಸ್ ಹೇಳಿದ್ದೇನು ಗೊತ್ತಾ ? – ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ವಿರುದ್ಧ ಮೀಟೂ ಆರೋಪ ಕೇಳಿ ಬಂದಿದೆ. ಬಿಜೆಪಿಯಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ ಮಾಧುರಿ ಎಂಬವರು ಈ ಆರೋಪ ಮಾಡಿದ್ದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಒಬ್ಬ ಸಿಎಂ ಆಗಿದ್ದವರು ಯಾವ ರೀತಿ ವರ್ತನೆ ಮಾಡಬೇಕು ಎನ್ನುವುದು ಗೊತ್ತಿರುತ್ತದೆ. ಬಿಜೆಪಿಯಲ್ಲಿ ಹಲವು ಮಂದಿ ಅವರವರ ಸ್ಟೇಟಸ್‍ನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಷ್ಟೋ ಕೆಲಸ ಇರುತ್ತದೆ. ಆದರೆ ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಅಂತಾ ಹೇಳೋದು, ನಿಮ್ಮನ್ನು ಅಲ್ಲಿ ನೋಡಿದ್ದೀನಿ ಅಂತಾ ಹೇಳೋದು ಎಷ್ಟು ಸರಿ ಅಲ್ಲವೇ? ಕಾಲ್ ಮಾಡೋದು, ನನ್ನ ಮೈ ಮೇಲೆ ಬರೋದು, ಮೈ ಟಚ್ ಮಾಡಿ ಕೂರೋದು, ಇದೆಲ್ಲ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಧುರಿ ಅವರ ಆರೋಪದ ಬಗ್ಗೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯಿಸಿದ ಸದಾನಂದಗೌಡರು, ಆಕೆ ಯಾರು ಅಂತ ಗೊತ್ತಿಲ್ಲ. ಆಕೆಗೆ ನಮ್ಮ ಪಕ್ಷದಲ್ಲಿ ಜವಾಬ್ದಾರಿ ನೀಡಿರಬಹುದು. ಆ ಆರೋಪದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದೆಲ್ಲ ಏನು ಇಲ್ಲ ಅಂತ ಕಹಳೆಗೆ ಫೋನ್ ಮೂಲಕ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫೇಸ್‍ಬುಕ್ ನಲ್ಲಿ ಬಿಜೆಪಿ ನಾಯಕರ ಬಗ್ಗೆ ಹೇಳಿಕೊಂಡಿದ್ದ ಮಹಿಳೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಈ ಹಿಂದೆ ಪ್ರಕಟಿಸಿದ್ದ ಪೋಸ್ಟನ್ನು ಡಿಲೀಟ್ ಮಾಡಿ ಮಾಧ್ಯಮದರು ನಾನು ಹೇಳದ ಹೆಸರನ್ನು ಹೇಳುತ್ತಿದ್ದಾರೆ ಎಂದು ಮರು ಸ್ಟೇಟಸ್ ಹಾಕಿದ್ದಾರೆ.