Recent Posts

Sunday, January 19, 2025
ಸುದ್ದಿ

ಅತಿಶಯ ಶ್ರೀ ಕ್ಷೇತ್ರ ಕುಂದಾದ್ರಿಯಲ್ಲಿ ಜ.14ರಂದು ವಾರ್ಷಿಕ ಜಾತ್ರಾ ಮಹೋತ್ಸವ – ಕಹಳೆ ನ್ಯೂಸ್

ತೀರ್ಥಹಳ್ಳಿ : ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಶಾಖಾ ಕ್ಷೇತ್ರ ಅಚಾರ್ಯ ಶ್ರೀ ಕುಂದ ಕುಂದಾಚಾರ್ಯ ತಪೋಭೂಮಿ ಶ್ರೀಕ್ಷೇತ್ರ ಕುಂದಾದ್ರಿಯಲ್ಲಿ ಜ.14ರಂದು ಭಗವಾನ್ ಶ್ರೀ 1008 ಪಾಶ್ರ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀಪದ್ಮಾವತಿ ಅಮ್ಮನವರ ವಾರ್ಷಿಕ ಜಾತ್ರ ಮಹೋತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪರಮಪೂಜ್ಯ ಜಗದ್ಗುರು ಸ್ವಸ್ತೀಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಕಲಿಕುಂಡ ಯಂತ್ರಾರಾಧನೆ, ಬ್ರಹ್ಮ ಯಕ್ಷ ಆರಧಾನೆ, ವಿಶೇಷ ಅಭಿಷೇಕ ಪೂಜೆ ಸಹಿತ ಅನೇಕ ದಾರ್ಮಿಕ ವಿಧಿಗಳ ಜೊತೆಗೆ ಜಿನ ಭಜನಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ನಡೆಯಲಿದೆ.