ರಾಮಕೃಷ್ಣ ಮಠದಲ್ಲಿ ರಾಷ್ಟೀಯ ಯುವ ದಿನಾಚರಣೆ ಕಾರ್ಯಕ್ರಮ : “ಧೀಮಂತ, ಆಕರ್ಷಕ ವ್ಯಕ್ತಿತ್ವದ ಸ್ವಾಮಿ ವಿವೇಕಾನಂದರು ಎಂದಿಗೂ ಯುವಕರ ಆದರ್ಶ” : ದಿನೇಶ್ ಗುಂಡು ರಾವ್ – ಕಹಳೆ ನ್ಯೂಸ್
ಮಂಗಳೂರು : ಧೀಮಂತ, ಆಕರ್ಷಕ ವ್ಯಕ್ತಿತ್ವದ ಸ್ವಾಮಿ ವಿವೇಕಾನಂದರು ಎಂದಿಗೂ ಯುವಕರ ಆದರ್ಶವಾಗಿದ್ದರು. ಈ ಹಿನ್ನಲೆಯಲ್ಲಿ ನಮ್ಮ ಪೂರ್ವ ಪ್ರಧಾನಮಂತ್ರಿ ದಿ. ರಾಜೀವ್ ಗಾಂಧಿಯವರು ವಿವೇಕಾನಂದರ ಜನ್ಮದಿನವನ್ನು ಯುವದಿನವನ್ನಾಗಿ ಆಚರಿಸುವ ಪದ್ಧತಿ ಜಾರಿಗೆ ತಂದರು. ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳು ನಮ್ಮನ್ನು ಸ್ಪೂರ್ತಿಗೊಳಿಸಬೇಕು. ಅವರ ತತ್ವ ಚಿಂತನೆಗಳು ನಮ್ಮಲ್ಲಿನ ಸತ್ಯ ತಿಳಿದುಕೊಳ್ಳಬೇಕೆನ್ನುವ ಕುತೂಹಲ ಹೆಚ್ಚಿಸುತ್ತದೆ ಮತ್ತು ಪರಿಪೂರ್ಣತೆಯತ್ತ ಕ್ರಮಿಸಲು ಸಹಾಯ ಮಾಡುತ್ತದೆ” ಎಂದು ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡು ರಾವ್ ಹೇಳಿದರು.
ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆದ ರಾಷ್ಟ್ರಿಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಸುರತ್ಕಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಇದರ ನಿರ್ದೇಶಕರಾದ ಪೆÇ್ರ. ಬಿ. ರವಿ ಮಾತನಾಡಿ “ಬದಲಾವಣೆಗಳು ಈಗ ಸಾಮಾನ್ಯವಾಗಿ ಬಿಟ್ಟಿವೆ. ಗೂಗಲ್ ಮತ್ತು ಸಮೂಹ, ಮಾಹಿತಿ ಮಾಧ್ಯಮಗಳ ಮೂಲಕ ವಿವೇಕಾನಂದರ ತತ್ವಗಳು ನಮ್ಮ ಯುವಕರನ್ನು ತಲುಪುತ್ತಾ ಅವರನ್ನು ಸಮರ್ಥರನ್ನಾಗಿ ಮಾಡಿ ದೇಶವನ್ನು ಆರ್ಥಿಕ, ಸಾಮಾಜಿಕ, ತಾಂತ್ರಿಕ ಮಟ್ಟದಲ್ಲಿ ಸಧೃಡವನ್ನಾಗಿ ಮಾಡಬಲ್ಲದು” ಎಂದು ಅಭಿಪ್ರಾಯಪಟ್ಟರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಾರಂಭದ್ಲ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ಆನಂದ್ ಕೆ. ಅವರು ಭಾಗವಹಿಸಿದ್ದರು.
ಕರ್ನಾಟಕ ವಿಧಾನ ಪರಿಷತ್ ನ ಸದಸ್ಯರಾದ ಶ್ರೀ ಹರೀಶ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 2024 ನೇ ವರ್ಷದ ಕ್ಯಾಲೆಂಡರ್ ಅನಾವರಣಗೊಳಿಸಲಾಯಿತು. ಆಶ್ರಮದ ವಿವಿಧ ಚಟುವಟಿಕೆಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಯುವ ಸ್ವಯಂಸೇವಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಮೊದಲನೇ ಅವಧಿಯಲ್ಲಿ ಲಂಡನ್ ರಾಮಕೃಷ್ಣ ವೇದಾಂತ ಸೆಂಟರ್ ನ ಮುಖ್ಯಸ್ಥರಾದ ಸ್ವಾಮಿ ಸರ್ವಸ್ಥಾನಂದಜಿ ಅವರು “ಸ್ಪೂರ್ತಿಯ ಗಣಿ ಸ್ವಾಮಿ ವಿವೇಕಾನಂದ” ಎಂಬ ವಿಷಯದ ಬಗ್ಗೆ ಮಾತನಾಡಿದರು. ಎರಡನೇ ಅವಧಿಯಲ್ಲಿ ಮೋಕ್ಷ್ಯ ಯೌಟ್ಯೂಬ್ ಚಾನೆಲ್ ನ ಸಂಸ್ಥಾಪಕರಾದ ಶ್ರೀಮತಿ ನಮೃತಾ ರಾವ್ ಅವರು “ಪೆÇಸೆಟಿವ್ ಕಂಟೆಂಟ್ಸ್ ಫಾರ್ ಇನ್ಕ್ರೆಡಿಬಲ್ ಭಾರತ್” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.
ನಂತರ “ಆತ್ಮನಿರ್ಭರ ಭಾರತದಲ್ಲಿ ಯುವಕರ ಪಾತ್ರ” ಎಂಬ ವಿಷಯದ ಕುರಿತು ಸಂವಾದ ನಡೆಯಿತು. ಸಂವಾದದಲ್ಲಿ ಪುನರಪಿ ಇಕೋ ಟೈಲ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ಹರಿಣಿ ಸೂರಜ್, ದಿ ವೆಬ್ ಪೀಪಲ್ ನ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಆದಿತ್ಯ ಕಲ್ಲೂರಾಯ ಹಾಗೂ ಸ್ವದೇಶಿ ಮಾರ್ಟ್ ನ ಸಂಸ್ಥಾಪಕರಾದ ಶ್ರೀ ಪ್ರಣವ್ ಭಟ್ ಉಪಸ್ಥಿತರಿದ್ದರು.
ಮಂಗಳೂರಿನ ರೇಡಿಯೋ ಸಾರಂಗ್ ನ ಆರ್. ಜೆ. ಅಭಿμÉೀಕ್ ಶೆಟ್ಟಿ ಅವರು ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದ್ದು, 600ಕ್ಕೂ ಹೆಚ್ಚು ಯುವಕರು ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಜಿ.ಹೆಚ್.ಎಸ್. ರಸ್ತೆಯ ಶ್ರೀನಿವಾಸ ಕಾಲೇಜ್ ಆಫ್ ಏವಿಯೇಷನ್, ಕೊಡಿಯಾಲಬೈಲ್ ನ ಎಸ್. ಡಿ. ಎಮ್. ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೊಟ್ಟಾರ ಚೌಕಿಯ ಎ. ಜೆ. ತಾಂತ್ರಿಕ ಮಹಾವಿದ್ಯಾಲಯ, ಬೋಂದೆಲ್ ನ ಮನ್ನೇಲ್ ಶ್ರೀನಿವಾಸ್ ನಾಯಕ್ ವ್ಯವಹಾರ ಅಧ್ಯಯನ ಸಂಸ್ಥೆ, ನೀರುಮಾರ್ಗದ ಮಂಗಳಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಬೆಂಜನಪದವಿನ ಕೆನರಾ ತಾಂತ್ರಿಕ ಮಹಾವಿದ್ಯಾಲಯ, ಸುರತ್ಕಲ್ ನ ಗೋವಿಂದದಾಸ ಸ್ನಾತಕೋತ್ತರ ಆಧ್ಯಯನ ಕೇಂದ್ರ ಒಳಗೊಂಡಂತೆ ವಿವಿಧ ಕಾಲೇಜುಗಳ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಈ ಸ್ವಾಗತಿಸಿ, ಮಂಗಳೂರು ರಾಮಕೃಷ್ಣ ಮಿಷನ್ ಸಂಯೋಜಕರಾದ ಶ್ರೀ ರಂಜಾನ್ ಬೆಳ್ಳಪ್ರ್ಪಾಡಿ ವಂದಿಸಿದರು, ಉಪನ್ಯಾಸಕಿ ಶ್ರೀಮತಿ ರೆಜಿನಾ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು.