Recent Posts

Sunday, January 19, 2025
ಸುದ್ದಿಸುಳ್ಯ

ಸುಳ್ಯ ಅರಂತೋಡು ಬಳಿ ರಸ್ತೆ ದಾಟಿದ ಕಾಡಾನೆಗಳ ಹಿಂಡು : ವಾಹನ ಸವಾರರಲ್ಲಿ ಆತಂಕ – ಕಹಳೆ ನ್ಯೂಸ್

ಸುಳ್ಯದ ಅರಂತೋಡು ಅಡ್ತಲೆ ಮಧ್ಯೆ ಚುಕ್ರಡ್ಕ ಎಂಬಲ್ಲಿ ಕಾಡಾನೆ ಹಿಂಡು ಇಂದು ಬೆಳಿಗ್ಗೆ ರಸ್ತೆ ದಾಟಿ ಆತಂಕ ಸೃಷ್ಟಿಸಿದೆ.

ಈ ಭಾಗದ ಕಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಗಜಪಡೆ ಸಂಚಾರ ನಡೆಯುತ್ತಿದ್ದು ಇಂದು ಕೂಡಾ ರಸ್ತೆ ದಾಟಿತು. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ . ಶಾಲಾ ಮಕ್ಕಳು ಕೂಡ ಸಂಚಾರ ನಡೆಸುವ ವೇಳೆ ಆದುದರಿಂದ ಸಹಜವಾಗಿ ಈ ಭಾಗದ ಜನ ಆತಂಕಕ್ಕೀಡಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ ಸುಳ್ಯಕ್ಕೆ ಬರುವ ವೇಳೆ ಎರಡು ಮೂರು ಆನೆಗಳು ರಸ್ತೆ ದಾಟುತ್ತಿರುವುದನ್ನು ನೋಡಿದೆ. ನನಗಿಂತ ಮುಂದೆ ಇದ್ದ ವಾಹನದವರು ಆರೇಳು ಆನೆಗಳನ್ನು ನೋಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು