Recent Posts

Monday, January 20, 2025
ಉಡುಪಿ

ಆಯತಪ್ಪಿ ಬಾವಿಗೆ ಬಿದ್ದ ವ್ಯಕ್ತಿಯನ್ನ ರಕ್ಷಿಸಿದ ಆಪತ್ಭಾಂಧವ ನಿತ್ಯಾನಂದ ಒಳಕಾಡು – ಕಹಳೆ ನ್ಯೂಸ್

ಉಡುಪಿ : ರಕ್ಷಣಾ ತಡೆಗೊಡೆಯಿಲ್ಲದ, ಬಾವಿಯಲ್ಲಿ ಬಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ಆಪತ್ಭಾಂಧವ ನಿತ್ಯಾನಂದ ಒಳಕಾಡುವರು ರಕ್ಷಿಸಿರುವ ಘಟನೆ ನಡೆದಿದೆ.

ಬಡಗು ಪೇಟೆಯಿಂದ ರಾಜಾಂಗಣ ಸಂಪರ್ಕಿಸುವ ರಸ್ತೆಯ ಸನಿಹ ಆವರಣ ಇಲ್ಲದ ಸುಮಾರು ಐವತ್ತು ಅಡಿ ಆಳದ ಬಾವಿಯಿದೆ. ಅಲ್ಲಿಂದ ಹಾದು ಬರುತ್ತಿದ್ದ ವ್ಯಕ್ತಿಗೆ ಬಾವಿ ಗೋಚರಕ್ಕೆ ಬಾರದೆ ಬಿದ್ದಿದ್ದಾರೆ. ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾವಿಯಿಂದ ಬೊಬ್ಬೆ ಕೇಳಿಬಂದಿದ್ದರಿಂದ ರಸ್ತೆಯಲ್ಲಿ ಹಾದು ಹೋಗುವರು ಸಂಶಯಪಟ್ಟು ಬಾಯಿಯಲ್ಲಿ ಇಣುಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ರಕ್ಷಣೆಗಾಗಿ ನಿತ್ಯಾನಂದ ಒಳಕಾಡುವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಬಂದ ಒಳಕಾಡು ಅವರು, ಹಗ್ಗದ ಸಹಾಯದಿಂದ ಬಾವಿಯಲ್ಲಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಕಾರ್ಯಚರಣೆಗೆ ರವಿ ಕಾಪು ಅವರು ಸಹಕರಿಸಿದ್ದಾರೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಹೊರ ಜಿಲ್ಲೆಯ ಯಾತ್ರಾರ್ಥಿ ಎಂದು ಶಂಕಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು