ಉಪ್ಪಿನಂಗಡಿ : ಜ.14ರಂದು (ನಾಳೆ) ಲಕ್ಷ್ಮೀ ಇಂಡಸ್ಟ್ರೀಸ್‍ನವರ ನೂತನ ‘ಕನಸಿನ ಮನೆ’ ಪ್ರಾರಂಭೋತ್ಸವ – ಕಹಳೆ ನ್ಯೂಸ್
ಉಪ್ಪಿನಂಗಡಿ : ಮನೆ, ಕಟ್ಟಡಕ್ಕೆ ಸ್ಟೈಲೀಶ್ ಲುಕ್ ನೀಡಿ ಗ್ರಾಹಕರ ಮನಗೆದ್ದಿರುವ ಲಕ್ಷ್ಮಿ ಇಂಡಸ್ಟ್ರೀಸ್‍ನವರ ನೂತನ ಸಹ ಸಂಸ್ಧೆ ‘ಕನಸಿನ ಮನೆ’ ಉಪ್ಪಿನಂಗಡಿಯಲ್ಲಿ ಜ.14ರಂದು (ನಾಳೆ) ಲೋಕಾರ್ಪಣೆಗೊಳ್ಳಲಿದೆ.
ಕನಸಿನ ಮನೆಯನ್ನ ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ಮಾನ್ಯ ಶ್ರೀ ಡಿ. ಹಷೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಶಶಿ ಕೆಟರಿಂಗ್ ಸರ್ವಿಸಸ್ ಪ್ರೈ.ಲಿ., ಬರೋಡ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಹರೀಶ್ ಪೂಂಜ, ಕರ್ನಾಟಕ ಸರಕಾರ ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್, ಪುತ್ತೂರು ಕೌಶಲ್ ಕನ್‍ಸ್ಟ್ರಕ್ಷನ್‍ನ ನವೀನ್ ಕುಮಾರ್, ಉಪ್ಪಿನಂಗಡಿ ಬಿ.ಕೆ, ಕನ್‍ಸ್ಟ್ರಕ್ಷನ್‍ನ ಬಿ.ಕೆ, ಸುಲೈಮಾನ್, ಆಗಮಿಸಲಿದ್ದಾರೆ.
ನೂತನ ತಂತ್ರಜ್ಞಾನ ಆಕರ್ಷಕ ವಿನ್ಯಾಸಗಳೊಂದಿಗೆ ಮತ್ತು ಮರಕ್ಕೆ ಪರ್ಯಾಯವಾಗಿ ಸಿಮೆಂಟಿನಿಂದ ತಯಾರಿಸಿದ ಕಟ್ಟಡ ಸಾಮಾಗ್ರಿಗಳನ್ನು ಪರಿಚಯಿಸಿದ ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ದಿ.ರಾಜು ಮೇಸ್ತ್ರಿಯವರ ಕನಸಿನ ಸಂಸ್ಧೆ.. ಸಣ್ಣ ಸಣ್ಣ ಹೆಜ್ಜೆಗಳಿಡುತ್ತಾ ಬೆಳೆದು ಬಂದು, ಈ ನಾಡಿನ ಜನರ ವಿಶ್ವಾಸನೀಯ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಆರಂಭವಾಗಿ 36 ವರ್ಷವಾಗಿದೆ. ಇದೀಗ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡುವ ಮನದಾಸೆಯಿಂದ ನೂತನ ‘ಕನಸಿನ ಮನೆ’ಯನ್ನ ಆರಂಭಿಸಿದ್ದಾರೆ. ಇಲ್ಲಿ ಸಿಮೆಂಟ್ – ಪೈಬರ್ – ಸ್ಟೀಲ್‍ನ ದಾರಂದ,ಕಿಟಕಿ ಫ್ರೇಮ್, ಬಾಗಿಲು, ಡಬ್ಲ್ಯು.ಪಿ.ಸಿ. ಡೋರ್ ಫ್ರೇಮ್ ವಿಂಡೋಸ್ ಫ್ರೇಮ್‍ಗಳು,ಅಲ್ಯುಮಿನಿಯಂ ಬಾತ್‍ರೂಮ್ ಡೋರ್ಸ್‍ಗಳು ನಮ್ಮಲ್ಲಿ ಲಭ್ಯ.