Sunday, November 24, 2024
ರಾಜ್ಯಸುದ್ದಿ

ಡಾ. ಶ್ರೀ ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ 15000 ಸದಸ್ಯರಿಂದ ಫೆ.04 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ – ಕಹಳೆ ನ್ಯೂಸ್

ಹುಬ್ಬಳ್ಳಿ : ಡಾ. ಶ್ರೀ ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಮಾರು 15000 ಸದಸ್ಯರಿಂದ ಫೆ.04 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.

ಸ್ವಚ್ಛತಾ ಮೂಲ ಮಂತ್ರ ಎಂಬಂತೆ ಭಾರತದಾದ್ಯಂತ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿರುವ ಡಾ. ನಾನಾಸಾಹೇಬ್ ಪ್ರತಿಷ್ಠಾನ ಈ ಬಾರಿ ಸುಮಾರು 15,000 ಸ್ವಯಂಸೇವಕರು (ಶ್ರೀ ಸದಸ್ಯರು) ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಿದ್ದು, ಸುಮಾರು 2,500 ಟನ್‍ಗಳಷ್ಟು ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆಯಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ(ಎಚ್‍ಡಿಎಂಪಿ) ಕಾರ್ಯಕ್ರಮಕ್ಕೆ ಅಗತ್ಯವಿರುವ ಸಾಮಗ್ರಿ ವಸ್ತು ಮತ್ತು ತ್ಯಾಜ್ಯ ಸಾಗಣೆ ವಾಹನಗಳನ್ನು ಒದಗಿಸುವಂತೆ ಕೋರಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೊಂದು ಮಾದರಿ ಕಾರ್ಯಕ್ರಮ ಭಾರತದ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ ಇದು ಮೊದಲು ನಾನು ಮಾಡಿ ಇನ್ನೊಬ್ಬರಿಗೆ ಮಾದರಿ ಯಾದಾಗ ಭಾರತ ಸ್ವಚ್ಚವಾಗಲು ಸಾಧ್ಯ ಎಂದು ಪ್ರತಿಷ್ಠಾನದ ಮುಖ್ಯಸ್ಥ ಸಚಿನ್ ದಾದಾ ಧರ್ಮಾಧಿಕಾರಿ ತಿಳಿಸಿದ್ದಾರೆ ಮತ್ತು ಎಲ್ಲಾ ನಾಗರಿಕರು ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಯಂ ಸೇವಕರ ಅನುಕೂಲಕ್ಕಾಗಿ ಹುಬ್ಬಳ್ಳಿಗೆ ವಿವಿಧ ಸ್ಥಳಗಳಿಂದ ವಿಶೇಷ ರೈಲುಗಳನ್ನು ಓಡಿಸಲಾಗುವುದುಮತ್ತು ಸಂಪೂರ್ಣ ಸಹಕಾರ ನೀಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.