Sunday, January 19, 2025
ಕುಂದಾಪುರಪುತ್ತೂರುರಾಜಕೀಯಸುದ್ದಿ

ವಿಕಸಿತ ಭಾರತ ಸಂಕಲ್ಪ ಯಾತ್ರೆ : “ಕೇಂದ್ರ ಸರಕಾರದ ಎಲ್ಲಾ ಯೋಜನೆಗಳು ಎಲ್ಲಾ ನಾಗರಿಕರಿಗೂ ಮುಟ್ಟಿಸುವಲ್ಲಿ ಎಲ್ಲರು ಒಂದಾಗಿ ಶ್ರಮಿಸೋಣ” ಕಾಪು ಶಾಸಕರು ಗುರ್ಮೆ ಸುರೇಶ್ ಶೆಟ್ಟಿ – ಕಹಳೆ ನ್ಯೂಸ್

ಕಾಪು : ಕೇಂದ್ರ ಸರಕಾರದ ಮಹತ್ತರವಾದ ಜನ ಉಪಯೋಗಿ ಯೋಜನೆಗಳು ನನ್ನ ಕ್ಷೇತ್ರದ ಪ್ರತಿ ಮನೆಗೂ ಮುಟ್ಟಬೇಕು ಅಧಿಕಾರಿಗಳೊಂದಿಗೆ ನಾನು ನನ್ನ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಬರುತ್ತೇನೆ ಪ್ರತಿಯೊಬ್ಬರ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡಲು ಸಬಂಧಪಟ್ಟ ಎಲ್ಲಾ ಅಧಿಕಾರಿಗಳು ನನ್ನ ಜೊತೆ ಇರುತ್ತಾರೆ, ಸರಿಯಾದ ಸಮಯಕ್ಕೆ ಬನ್ನಿ ಕುಳಿತು ಚರ್ಚಿಸಿ ಪರಿಹಾರ ಕಂಡು ಕೊಳ್ಳೋಣ ಎಂದು ವಿಕಸಿತ ಭಾರತ ಸಂಕಲ್ಪ ರಥ ತರುವ ಸಂದೇಶದ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಹೇಳಿದರು.

ಇನ್ನಂಜೆ ಶಾಲಾ ರಜತ ಮಹೋತ್ಸವ ಸಭಾಭವನ ಮತ್ತು ಶಾಲಾ ವಠಾರದಲ್ಲಿ ಕೇಂದ್ರ ಸರಕಾರದ ಹತ್ತು ಹಲವಾರು ಯೋಜನೆಗಳ (ಅಯುμÁ್ಮನ್ ಯೋಜನೆ, ಉಜ್ವಲ ಯೋಜನೆ, ಜನಧನ್ ಯೋಜನೆ ವಿಶ್ವಕರ್ಮ ಯೋಜನೆ, ಪಿ ಎಂ ಕಿಸಾನ್ ಯೋಜನೆ, ಮುದ್ರಾ ಯೋಜನೆ, ಜೀವನ ಜ್ಯೋತಿ ಭೀಮಾ ಯೋಜನೆ… ಮುಂತಾದ)ಗಳ ಬಗ್ಗೆ ಉತ್ತಮ ಮಾಹಿತಿ ಮತ್ತು ಯೋಜನೆಗಳಿಗೆ ಸಂಬಂಧ ಪಟ್ಟ ಬ್ಯಾಂಕ್ ನವರು ಅಲ್ಲಿಯೇ ಉಪಸ್ಥಿತರಿದ್ದು ತಮಗೆ ಉತ್ತಮ ಸಲಹೆ ಸೂಚನೆ ನೀಡಲಿರುವರು ದಯವಿಟ್ಟು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಗ್ರಾಮಸ್ಥರಲ್ಲಿ ಪ್ರೀತಿಯಿಂದ ವಿನಂತಿಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಕಾಪು ಶಾಸಕರು ಅದ ಗುರ್ಮೆ ಸುರೇಶ್ ಶೆಟ್ಟಿ, ತಹಸೀಲ್ದಾರರು, ಇ ಒ, ರವರು, ವಿವಿಧ ಯೋಜನೆಗಳ ಅಧಿಕಾರಿಗಳು ಭಾಗವಹಿಸಲಿರುವರು.ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಮಾಲಿನಿ ಶೆಟ್ಟಿ ಗ್ರಾಮ ಸ್ತ ರಲ್ಲಿ ವಿನಂತಿಸಿಕೊಂಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು