Saturday, November 23, 2024
ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ; ಎಲ್ಲಾ 13 ಸ್ಥಾನಗಳನ್ನು ಗೆದ್ದು ಜಯಭೇರಿ ಬಾರಿಸಿದ ಸಹಕಾರಿ ಭಾರತಿ ಅಭ್ಯರ್ಥಿಗಳು – ಕಹಳೆ ನ್ಯೂಸ್

ವಿಟ್ಲ: ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಶನಿವಾರ ಮತದಾನ ನಡೆಯಿತು. 1998 ರ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಸಹಕಾರ ಭಾರತಿ, ಬಿಜೆಪಿ ಬಂಡಾಯ, ಕಾಂಗ್ರೆಸ್, ಸ್ವತಂತ್ರ ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಿತು.

ಶನಿವಾರ 9 ಗಂಟೆಯಿಂದ ಸಾಯಂಕಾಲ 4 ರವರೆಗೆ ಚುನಾವಣೆ ನಡೆದು, ಬಳಿಕ ಎಣಿಕೆ ಪ್ರಕ್ರಿಯೆ ನಡೆಯಿತು. ಒಟ್ಟು 77.05 ಶೇ.ಮತದಾನವಾಗಿದ್ದು, 1350 ಸದಸ್ಯರು ಮತ ಚಲಾಯಿಸಿದ್ದರು. ಆಡಳಿತ ಮಂಡಳಿಯಲ್ಲಿ ಎಸ್.ಸಿ., ಎಸ್. ಟಿ., ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬಿ ತಲಾ 1 ಸ್ಥಾನ, ಮಹಿಳೆ 2, ಸಾಮಾನ್ಯ 7 ಸ್ಥಾನಗಳಿದ್ದು, ಒಟ್ಟು 13 ಸ್ಥಾನಗಳಿದ್ದು,ಕಣದಲ್ಲಿ 32 ಸ್ಪರ್ಧಿಗಳಿದ್ದರು .

ಜಾಹೀರಾತು
ಜಾಹೀರಾತು
ಜಾಹೀರಾತು

ಸಹಕಾರ ಭಾರತಿಯಿಂದ ಹಾಗೂ ಕಾಂಗ್ರೆಸ್ ನಿಂದ 13 ಸ್ಥಾನಕ್ಕೂ ಅಭ್ಯರ್ಥಿಗಳು ಸ್ಪರ್ಧಿಸಿದರೆ, 4 ಬಿಜೆಪಿ ಬಂಡಾಯ ಅಭ್ಯರ್ಥಿಗಳೂ ಸೇರಿ 6 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಕುತೂಹಲಕಾರಿ ಫಲಿತಾಂಶ ನೀಡಬಹುದೆಂದು ಊಹಿಸಿದ್ದರೂ, ಕೊನೆ ಕ್ಷಣದಲ್ಲಿ ಎಲ್ಲಾ 13 ಸ್ಥಾನಗಳನ್ನು ಸಹಕಾರಿ ಭಾರತಿಯ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು