Saturday, November 23, 2024
ರಾಜಕೀಯರಾಷ್ಟ್ರೀಯಸುದ್ದಿ

ಶ್ರೀರಾಮ ಬಿಪಿಎಲ್‌ ಕಾರ್ಡ್‌ ಹೊಂದಿರಬೇಕು: ರಾಮಮಂದಿರ ಲೇವಡಿ ಮಾಡಿದ I.N.D.I.A ಮೈತ್ರಿ ನಾಯಕಿ! – ಕಹಳೆ ನ್ಯೂಸ್

ಡಿಜಿಟಲ್ ಡೆಸ್ಕ್: ಶ್ರೀರಾಮನ ಮೇಲೆ ವಿಪಕ್ಷಗಳ ಟೀಕೆ ಮುಂದುವರಿಯುಡಿದ್ದು, ಶನಿವಾರ ಇಂಡಿಯಾ ಮೈತ್ರಿಯ ಭಾಗವಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯ ಸಂಸದೆ ಶತಾಬ್ದಿ ರಾಯ್‌ ಶ್ರೀರಾಮನ ಬಗ್ಗೆ ವಿವಾದಿತ ಮಾತನಾಡಿದ್ದಾರೆ.

ಭಗವಾನ್‌ ರಾಮ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕಾರ್ಡ್‌ ಹೊಂದಿದ್ದಾರೆ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿರುವ ವಿಡಿಯೋದಲ್ಲಿ ಲೋಕಸಭಾ ಸಂಸದೆಯಾಗಿರುವ ಶತಾಬ್ದಿ ರಾಯ್‌, ಬಿಜೆಪಿ ತಾನು ಭಗವಾನ್‌ ರಾಮನಿಗೆ ಮನೆಯನ್ನು ನೀಡಿದ್ದಾಗಿ ಹೇಳಿಕೊಳ್ಳುತ್ತಿದೆ. ಇದನ್ನು ಕೇಳಿ ನನಗೆ ಆಘಾತವಾಯಿತು. ರಾಮನಿಗೆ ಮನೆಯನ್ನು ನೀಡುವಷ್ಟು ಶಕ್ತಿ ಬಿಜೆಪಿಯವರಿಗೆ ಬಂದಿದೆ. ಬಹುಶಃ ರಾಮ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕಾರ್ಡ್‌ ಹೊಂದಿರಬೇಕು. ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮನೆಗಳು ನೀಡುತ್ತಿರುವಂತೆ, ಬಿಜೆಪಿ ಕೂಡ ಶ್ರೀರಾಮನಿಗೆ ಬಿಪಿಎಲ್‌ ಕಾರ್ಡ್‌ನ ಅಡಿಯಲ್ಲಿಯೇ ಮನೆಯನ್ನು ನೀಡಿದೆ’ ಎಂದು ಹೇಳಿದ್ದಾರೆ.

ಬಹುಶಃ ಇದೇ ರೀತಿಯ ಮನೆಗಳನ್ನು ರಾಮನ ಮಕ್ಕಳಾದ ಲವ ಹಾಗೂ ಕುಶರಿಗೆ ನೀಡಿದ್ದರೆ, ಅವರ ಕೆಲಸ ಸಂಪೂರ್ಣವಾಗುತ್ತಿತ್ತು ಎಂದು ತೃಣಮೂಲ ಕಾಂಗ್ರೆಸ್‌ ನಾಯಕಿ ಶ್ರೀರಾಮ ಮಂದಿರವನ್ನು ಲೇವಡಿ ಮಾಡಿದ್ದಾರೆ.

ಶತಾಬ್ದಿ ರಾಯ್‌ ಮಾತನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಶಕುಂತಾ ಮಜುಂದಾರ್‌, ‘ ಪ್ರಭು ಶ್ರೀರಾಮನ ಕುರಿತಾಗಿ ಶತಾಬ್ದಿ ರಾಯ್‌ ಅವರ ಹೇಳಿಕೆಗಳು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಹಿಂದು ಧರ್ಮ ಹಾಗೂ ನಮ್ಮಲ್ಲಿರುವ ಆಳವಾದ ನಂಬಿಕೆಗಳ ಕುರಿತಾಗಿ ಇರುವ ತಾತ್ಸಾರವನ್ನು ತೋರಿಸಿದೆ. ಇದು ವಿಶ್ವದಲ್ಲಿರುವ ಎಲ್ಲಾ ಹಿಂದುಗಳಿಗೂ ಅವಮಾನ’ ಎಂದಿದ್ದಾರೆ.