Recent Posts

Monday, January 20, 2025
ಸುದ್ದಿ

ಲಿಂಗಾಯಿತರ ಅಸ್ಮಿತೆಯನ್ನು ಡಿ.ಕೆ.ಶಿ ಪ್ರಶ್ನಿಸುವಂತಿಲ್ಲ: ಡಾ.ಎಂ.ಬಿ.ಪಾಟೀಲ – ಕಹಳೆ ನ್ಯೂಸ್

ಬೆಂಗಳೂರು: ಲಿಂಗಾಯಿತ ಪ್ರತ್ಯೇಕ ಧರ್ಮ ವಿಷಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಿದ್ದರಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದು ಡಿಕೆಶಿ ಹೇಳಿದ್ದಾರೆ.

ಆದರೆ, ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಭಾಗದಲ್ಲಿ ಕೂಡ ಕಾಂಗ್ರೆಸ್ ಸೋತಿದೆ ಎಂಬುದನ್ನು ಶಿವಕುಮಾರ ಮರೆತಿದ್ದಾರೆ ಎಂದು ಲಿಂಗಾಯಿತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ನಾಯಕ ಹಾಗೂ ಮಾಜಿ ಸಚಿವ ಡಾ.ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಸುದ್ದಿಗಾರರ ಜತೆ ಮಾತನಾಡಿ, ಒಕ್ಕಲಿಗರು ಹಾಗೂ ಕೆಂಪೇಗೌಡರ ಕುರಿತು ಲಿಂಗಾಯಿತರು ಅಪಾರ ಪ್ರೀತಿ, ಗೌರವ ಇರಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಲಿಂಗಾಯಿತರ ಅಸ್ಮಿತೆಯನ್ನು ಡಿ.ಕೆ.ಶಿವಕುಮಾರ ಪ್ರಶ್ನಿಸುವ ಹಾಗೂ ನಮ್ಮ ಧರ್ಮದ ಹೋರಾಟದ ವಿಷಯದಲ್ಲಿ ಮೂಗು ತೂರಿಸುವ ಕೆಲಸ ಮಾಡಬಾರದು ಅಂತ ತಿರುಗೇಟು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು