Recent Posts

Monday, January 20, 2025
ಸುದ್ದಿ

ವಿಶಿಷ್ಟ ವೇಷ ಧರಿಸಿ ಧನ ಸಂಗ್ರಹಿಸುವ ಮೂಲಕ ಸಮಾಜದಲ್ಲಿ ಇತರರ ನೋವಿಗೆ ಸ್ಪಂದನೆ – ಕಹಳೆ ನ್ಯೂಸ್

ಮಂಗಳೂರು: ಕರಾವಳಿಯಲ್ಲಿ ದಸರಾ ಸಮಯದಲ್ಲಿ ವಿವಿಧ ವೇಷಹಾಕೋದು ಒಂದು ಸಂಪ್ರದಾಯ. ಆದ್ರೆ ಇಲ್ಲೊಂದು ತಂಡ ತನ್ನ ವಿಭಿನ್ನ ಕಾನ್ಸೆಪ್ಟ್ನಿಂದ ಮತ್ತು ವಿಭಿನ್ನ ಚಿಂತನೆಯಿಂದ ಸಮಾಜಮುಖಿಯಾಗಲು ಪ್ರಯತ್ನಿಸುತ್ತಿದೆ.

ಪಡುಬಿದ್ರಿ ಕಂಚಿನಡ್ಕದಲ್ಲಿ ಸ್ಥಾಪಿಸಿದ ಭಗವತಿ ಗ್ರೂಫ್ ಯುವಕರ ತಂಡವು ವಿಶಿಷ್ಟ ವೇಷ ಧರಿಸಿ ಧನ ಸಂಗ್ರಹಿಸುವ ಮೂಲಕ ಸಮಾಜದಲ್ಲಿ ಇತರರ ನೋವಿಗೆ ಸ್ಪಂದನೆ ನೀಡಲು ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಲಿವುಡ್‌ನ ಫೇಮಸ್ ಸಿನೆಮಾಗಳಲ್ಲಿ ಒಂದಾದ ಪ್ರಿಡೇರ‍್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸ್ಪೆಷಲ್ ಕ್ರೀಯೇಚರ್‌ಗಳ ವೇಷ ಧರಿಸಿ ಎಲ್ಲರ ಗಮನಸೆಳೆದರು. ಗುಂಪಿನ ಸದಸ್ಯ ಹರೀಶ್ ಪರಿಕಲ್ಪನೆಯಲ್ಲಿ ಸಂಘದ ಸದಸ್ಯರಾದ ಶಿವರಾಮ, ವಾಸು, ಪೂರ್ಣೇಶ್ ಹಾಗೂ ಅರ್ಜುನ್ ವೇಷ ಧರಿಸಿದ್ದಾರೆ. ಈ ವೇಷ ಮಾಡಲು ಪೋಮ್, ಥರ್ಮೋಕೂಲ್, ಪಿವಿಸಿ ಪೈಪುಗಳನ್ನು ಬಳಸಿದ್ದಾರೆ. ಒಟ್ಟಾಗಿ ಕಲೆಕ್ಷನ್ ಆಗೋ ಹಣವನ್ನು ಸದ್‌ವಿನಿಯೋಗಿಸೋದು ತಂಡದ ಗುರಿಯಾಗಿದೆ.