Sunday, January 19, 2025
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ವಿನಾಯಕ ಚಾರಿಟೇಬಲ್ ಟ್ರಸ್ಟ್ ರಿ. ಬಲ್ನಾಡು ಇದರ 9ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುವ ವಿನಾಯಕ ಟ್ರೋಫಿ- 2024ರ ಆಮಂತ್ರಣ ಪತಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಬಲ್ನಾಡು, ವಿನಾಯಕ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬಲ್ನಾಡು ವತಿಯಿಂದ ಫೆ.11ರಂದು “ವಿನಾಯಕ ಟ್ರೋಫಿ – 2024” ಪುರುಷರ ಗ್ರಾಮ ಸೀಮಿತ ಮಟ್ಟದ ಮುಕ್ತ ಹಾಗೂ ಬಲ್ನಾಡು ವಲಯ ಮಟ್ಟದ ಪ್ರೊ ಮಾದರಿಯ ಮ್ಯಾಟ್ ಅಂಕಣದಲ್ಲಿ ಕಬಡ್ಡಿ ಪಂದ್ಯಾಟವು ಬಲ್ನಾಡಿನ ವಿನಾಯಕ ಕ್ರೀಡಾಂಗಣದಲ್ಲಿ ನಡೆಯಲಿದೆ.

ಫೆ.11ರಂದು ನಡೆಯುವ “ವಿನಾಯಕ ಟ್ರೋಫಿ – 2024”ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮುತ್ತಪ್ಪ ಗೌಡ ಕಾಂತಿಲ, ಭರತ್ ಚನಿಲ, ಅಚ್ಯುತ ಕೋಡಿಯಡ್ಕ, ಶರತ್ ಮುದಲಾಜೆ, ಗುರುರಾಜ್ ವಿನಾಯಕ ನಗರ, ಪುರುಷೋತ್ತಮ ಗೌಡ ಮುದಲಾಜೆ, ವಸಂತ ಮುದಲಾಜೆ, ರೂಪೇಶ್ ಬಲ್ನಾಡ್, ಪವನ್ ಬಲ್ನಾಡ್, ಪುನೀತ್ ಮುದಲಾಜೆ, ಯಶವಂತ ಕೋಡಿಯಡ್ಕ, ಮತ್ತು ವಿನಾಯಕ ಚಾರಿಟೇಬಲ್ ಟ್ರಸ್ಟ್ ರಿ. ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ “ವಿನಾಯಕ ಟ್ರೋಫಿ – 2024” ಕಾರ್ಯಕ್ರಮವನ್ನು ಬಲ್ನಾಡು ಮುದಲಾಜೆಯ ಕಾರಿಂಜ ಜ್ಯೋತಿಷ್ಯರಾದ ಬಾಲಕೃಷ್ಣ ಆಚಾರ್ ಉದ್ಘಾಟಿಸಲಿದ್ದಾರೆ.
ಇನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ನಿ. ದ ಅಧ್ಯಕ್ಷ ಹಾಗೂ ನ್ಯಾಯವಾದಿ ಚಿದಾನಂದ ಬೈಲಾಡಿ, ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ರವಿ ನೆಲ್ಲಿತ್ತಾಯ, ಬಲ್ನಾಡು ಶ್ರಿದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾ ಆರ್.ಗೌರಿ, ಸದಸ್ಯೆ ಶ್ರೀಮತಿ ಪೂರ್ಣಿಮ ಚೆನ್ನಪ್ಪ ಗೌಡ ಕೋಡಿಯಡ್ಕ, ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಆರ್.ಭಟ್ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಅಜೇಯ್ ಕುಮಾರ್ ಮತ್ತಿತ್ತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ದ.ಕ.ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಲ್ನಾಡು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನಿ. ಇದರ ಅಧ್ಯಕ್ಷ ಸತೀಶ್ ವಳಗುಡ್ಡೆ, ದ.ಕ.ಜಿಲ್ಲೆ ಅಮೆಚೂರು ಕಬ್ಬಡ್ಡಿ ಅಸೋಸಿಯೇಶನ್ (ರಿ.)ನ ಕಾರ್ಯಧ್ಯಕ್ಷ ಚಂದ್ರಹಾಸ ಶೆಟ್ಟಿ, ದ.ಕಜಿಲ್ಲಾ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷ ಸಹಜ್‌ರೈ ಬಳಜ್ಜ, ಪುತ್ತೂರಿನ ಉದ್ಯಮಿ ಉಜ್ವಲ್ ಪ್ರಭು, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಚಾಲಕ ಮುರಳಿಕೃಷ್ಣ ಹಸಂತ್ತಡ್ಕ, ಮಂಗಳೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ ರೈ ಬಾಲ್ಯೊಟ್ಟು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಧಕೃಷ್ಣ ಆಳ್ವ ಸಾಜ, ಪುತ್ತೂರು ಎ.ಪಿ.ಎಂ.ಸಿ.ಯ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಕೃಷ್ಣ ರೈ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.