Recent Posts

Sunday, January 19, 2025
ಉಡುಪಿಶಿಕ್ಷಣ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲೆಯ ವತಿಯಿಂದ ಸ್ವಾಮಿ ವಿವೇಕಾನಂದರ 151ನೇ ಜನ್ಮ ಜಯಂತಿ ಆಚರಣೆ – ಕಹಳೆ ನ್ಯೂಸ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲೆಯ ವತಿಯಿಂದ ಸಿಡಿಲಸಂತ ಸ್ವಾಮಿ ವಿವೇಕಾನಂದರ 151ನೇ ಜನ್ಮ ಜಯಂತಿಯ ಪ್ರಯುಕ್ತ ಜಿಲ್ಲೆಯ 20ಕ್ಕೂ ಅಧಿಕ ಕಾಲೇಜು ಮತ್ತು ಹಾಸ್ಟೆಲ್ ಘಟಕಗಳಲ್ಲಿ, ಬೌದ್ಧಿಕ ಮತ್ತು ಪುಷ್ಪಾರ್ಚನೆಗಳನ್ನು ನಡೆಸುವುದರ ಮೂಲಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲಾಯಿತು.

ಕಾರ್ಕಳದ ಶಿರ್ಡಿ ಕಾಲೇಜಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿಭಾಗ ಸಂಚಾಲಕ ಕಾರ್ಯದರ್ಶಿ ಶ್ರೀರಾಮ ಅಂಗೀರಸ ಇವರು”ವಿವೇಕಾನಂದರು ಎಂದಿಗೂ ಯುವಕರಿಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ ಮತ್ತು ಅವರ ವಿಚಾರಗಳು ಪ್ರತಿಯೊಬ್ಬರ ಬದುಕಿಗೆ ಒಂದು ದಾರಿದೀಪದಂತೆ ಇದೆ” ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಕಾರ್ಯಕ್ರಮಗಳಲ್ಲಿ ವಿಭಾಗ ಸಹ ಪ್ರಮುಖ ಕಿರಣ್ ಕುಂದಾಪುರ ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ ಹಾಗೂ ಪ್ರಮುಖರಾದ ಅಜಿತ್ ಜೋಗಿ,ಶ್ರೇಯಸ್,ಪವನ್, ಸನತ್, ವಿನಾಯಕ್,ಸ್ವಸ್ತಿಕ್ ,ನವೀನ್ ,ಸಂಹಿತಾ, ಧನ್ಯ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು