‘ಕಾಟೇರ’ ಸಿನಿಮಾ ತೆರೆಕಂಡು 15 ದಿನ ಕಳೆದರೂ ಕ್ರೇಜ್ ಮಾತ್ರ ಕಮ್ಮಿ ಆಗುತ್ತಿಲ್ಲ. ಸಂಕ್ರಾಂತಿ ಸಂಭ್ರಮದಲ್ಲಿ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪರಭಾμÁ ದೊಡ್ಡ ಸಿನಿಮಾಗಳ ಆರ್ಭಟದ ನಡುವೆಯೂ ಕನ್ನಡ ಮಣ್ಣಿನ ‘ಕಾಟೇರ’ನ ಖದರ್ ಜೋರಾಗಿದೆ.
ಡಿಸೆಂಬರ್ 29ರಂದು ಮಧ್ಯರಾತ್ರಿಯಿಂದಲೇ ಥಿಯೇಟರ್‍ಗಳಲ್ಲಿ ‘ಕಾಟೇರ’ನ ದರ್ಬಾರ್ ಶುರುವಾಗಿತ್ತು. ಸಿನಿಮಾ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಫಸ್ಟ್ ವೀಕೆಂಡ್‍ನಲ್ಲೇ 57 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಹೊಸ ವರ್ಷದ ಸಂಭ್ರಮದಲ್ಲೂ ಭರ್ಜರಿ ಗಳಿಕೆ ಕಂಡ ಸಿನಿಮಾ ಹಲವು ಥಿಯೇಟರ್‍ಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಮುಂದುವರೆಸಿತ್ತು.
ವೀಕೆಂಡ್ ಮಾತ್ರವಲ್ಲ ವಾರದ ದಿನಗಳಲ್ಲೂ ಸಂಜೆ ಹೊತ್ತು ಸಾಕಷ್ಟು ಕಡೆಗಳಲ್ಲಿ ‘ಕಾಟೇರ’ ಸಿನಿಮಾ ಹೌಸ್‍ಫುಲ್ ಪ್ರದರ್ಶನ ಕಾಣುತ್ತಾ ಬಂದಿದೆ. ಸಂಕ್ರಾಂತಿ ಹಬ್ಬಕ್ಕೆ ಯಾವುದೇ ಕನ್ನಡ ಸಿನಿಮಾ ಬಿಡುಗಡೆ ಆಗಲಿಲ್ಲ. ತೆಲುಗಿನ ‘ಗುಂಟೂರು ಖಾರಂ’, ‘ಸೈಂಧವ್’, ‘ಹನುಮಾನ್’, ‘ನಾ ಸಾಮಿ ರಂಗ’ ಜೊತೆಗೆ ತಮಿಳಿನ ‘ಕ್ಯಾಪ್ಟನ್ ಮಿಲ್ಲರ್’, ‘ಮಿಷನ್’, ‘ಅಯಲಾನ್’ ಸಿನಿಮಾಗಳು ಕರ್ನಾಟಕದಲ್ಲೂ ಬಿಡುಗಡೆ ಆಗಿವೆ. ಆದರೂ ‘ಕಾಟೇರ’ನ ಹವಾ ಕಮ್ಮಿ ಆಗಿಲ್ಲ.
‘ಸಲಾರ್’ ಹಾಗೂ ‘ಡಂಕಿ’ ಸಿನಿಮಾಗಳಿಗೂ ಜಗ್ಗದೇ ಬಾಕ್ಸಾಫೀಸ್ ದೋಚಿದ ‘ಕಾಟೇರ’ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 2 ವಾರಕ್ಕೆ 158 ಕೋಟಿ ರೂ. ಗಳಿಕೆ ಕಂಡಿರುವ ಸಿನಿಮಾ 200 ಕೋಟಿ ರೂ. ಗಳಿಕೆಯತ್ತ ಮುಖ ಮಾಡಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಸಿನಿಮಾ ನೋಡಲು ಬರ್ತಿದ್ದಾರೆ.
17ನೇ ದಿನವಾದ ಇಂದು ಕೂಡ ರಾಜ್ಯಾದ್ಯಂತ ಸಿನಿಮಾ 35ಕ್ಕೂ ಅಧಿಕ ಸ್ಕ್ರೀನ್‍ಗಳಲ್ಲಿ ಸಿನಿಮಾ ಫಸ್ಟ್ ಶೋ ಹಾಗೂ ಸೆಕೆಂಡ್ ಶೋ ಹೌಸ್‍ಫುಲ್ ಆಗಿದೆ. ಬುಕ್‍ಮೈ ಶೋನಲ್ಲಿ ಸಾಕಷ್ಟು ಟಿಕೆಟ್‍ಗಳು ಬುಕ್ ಆಗುತ್ತಿದೆ. 17 ದಿನಗಳ ಬಳಿಕವೂ ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಈ ರೀತಿ ಮುಗಿಬೀಳುತ್ತಿರುವುದು ಸಂತಸದ ವಿಚಾರ. ಒಳ್ಳೆ ಸಿನಿಮಾ ಬಂದರೆ ಪ್ರೇಕ್ಷಕರು ಸಿನಿಮಾ ನೋಡಲು ಬಂದೇ ಬರುತ್ತಾರೆ ಎನ್ನುವುದಕ್ಕೆ ‘ಕಾಟೇರ’ ಉತ್ತಮ ಉದಾಹರಣೆ.
ಮಂಡ್ಯದ ಮಹಾವೀರ್, ಜೆ.ಪಿ ನಗರದ ಸಿದ್ದೇಶ್ವರ, ಶಿರಾ, ಮುಧೋಳ್, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು ಸೇರಿದಂತೆ ಹಲವೆಡೆ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಲೇ ಇದೆ. ‘ಕಾಟೇರ’ನನ್ನು ಪ್ರೇಕ್ಷಕರು ಬಾಚಿ ಅಪ್ಪಿಕೊಂಡಿದ್ದಾರೆ. 3ನೇ ವಾರ 412 ಸಿಂಗಲ್ ಸ್ಕ್ರೀನ್ ಹಾಗೂ 72 ಮಲ್ಟಿಪ್ಲೆಕ್ಸ್‍ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಮೌತ್ ಟಾಕ್‍ನಿಂದಲೇ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಅಭಿಮಾನಿಗಳು ಮಾತ್ರವಲ್ಲ ಬೇರೆ ನಟರ ಅಭಿಮಾನಿಗಳು ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ದರ್ಶನ್ ಅಭಿನಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. 70ರ ದಶಕದ ಕರ್ನಾಟಕದ ಹಳ್ಳಿಗಳ ಚಿತ್ರಣವನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆಲುವು ಸಾಧಿಸಿದೆ.
ತರುಣ್ ನಿರ್ದೇಶನ, ಮಾಸ್ತಿ ಸಂಭಾಷಣೆ, ಹರಿಕೃಷ್ಣ ಸಂಗೀತ, ಕಲಾವಿದರ ಅಭಿನಯ ಎಲ್ಲವನ್ನು ಕೂಡ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಒಂದು ವಿಭಿನ್ನ ಪ್ರಯೋಗಕ್ಕೆ ಕೈಹಾಕಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸಕ್ಸಸ್ ಕಂಡಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ವಿದೇಶಗಳಲ್ಲಿ ಸಹ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.