Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ 2024ನೆಯ ಸಾಲಿನ ಅಧ್ಯಕ್ಷರಾಗಿ ರಮೇಶ ಎಂ. ಬಾಯಾರು ಪುನರಾಯ್ಕೆ- ಕಹಳೆ ನ್ಯೂಸ್

ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್) ವಿಟ್ಲ ಇಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅದರಂತೆ ಉಪಾಧ್ಯಕ್ಷರಾಗಿ ಎಂ.ಕೆ. ನಾಯ್ಕ್ ಅಡ್ಯನಡ್ಕ ಕಾರ್ಯದರ್ಶಿಯಾಗಿ ಪುಷ್ಪ ಎಚ್, ಜೊತೆ ಕಾರ್ಯದರ್ಶಿಯಾಗಿ ವಸಂತ ನಾಯಕ್ ಅಜೇರು, ಸಂಘಟನಾ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಒಕ್ಕೆತ್ತೂರು, ಕೋಶಾಧಿಕಾರಿಯಾಗಿ ಶ್ರೀಪತಿ ನಾಯಕ್ ನಾಟೇಕಲ್ಲು ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ ಹತ್ತು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಭಾಸ್ಕರ ಅಡ್ವಳ, ಮಹಾಬಲ ಭಟ್ ನೆಗಳಗುಳಿ, ವಿಠಲ ಶೆಟ್ಟಿ ವಿಟ್ಲ ಉಪಸ್ಥಿತರಿದ್ದರು. ಇದೇ ಸಬೆಯಲ್ಲಿ ಇತ್ತೀಚೆಗೆ ನಿಧನರಾದ ವಿ. ಮ . ಭಟ್ ಅಡ್ಯನಡ್ಕ ಮತ್ತು ಅಮೃತ ಸೋಮೇಶ್ವರ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಯರಾಮ ಪಡ್ರೆ ಮತ್ತು ಮಹಾಬಲ ಭಟ್ ನೆಗಳಗುಳಿ ದಿವಂಗತರ ಬಗ್ಗೆ ಮಾತನಾಡಿದರು. ಲೀಲಾವತಿ ತೊರಣಕಟ್ಟೆ ಸ್ಫೂರ್ತಿ ಗೀತೆ ಹಾಡಿದರು. ಶ್ರೀಪತಿ ನಾಯಕ್ ನಾಟೇಕಲ್ಲು ಸ್ವಾಗತಿಸಿ. ಇಸ್ಮಾಯಿಲ್ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು