Recent Posts

Monday, January 20, 2025
ಉಡುಪಿರಾಜಕೀಯಸುದ್ದಿ

ಇನ್ನಂಜೆ ಪಂಚಾಯತ್ ನಲ್ಲಿ ಭಾರತ ವಿಕಾಸ್ ಸಂಕಲ್ಪ ಕಾರ್ಯಕ್ರಮ – ಕಹಳೆ ನ್ಯೂಸ್

ಯೋಜನೆಗಳು ಪ್ರತಿಯೊಬ್ಬ ನಾಗರೀಕನಿಗೂ ಮುಟ್ಟಿಸುವ ಮತ್ತು ತಿಳಿಸುವ ಉದ್ದೇಶವೇ ವಿಕಸಿತ ಭಾರತ ಸಂಕಲ್ಪ ರಥಯಾತ್ರೆ 2047ರಲ್ಲಿ ಭಾರತ ವಿಶ್ವದ ಅಗ್ರಮಾನ್ಯ ವಿಕಸಿತಾ ಸ್ತಾನದಲ್ಲಿ ಕಾಣಲು ಪ್ರಧಾನಿಯವರ ಬಿಡುವಿಲ್ಲದ ಸಾಧನೆಗೆ ಇಡಿ ಜಗತ್ತು ಸಾಕ್ಷಿಯಾಗಿದೆ.

ಪ್ರತಿಯೊಬ್ಬರು ಅರೋಗ್ಯದಿಂದ, ಸಮೃದ್ಧತೆಯಿಂದ ನೆಮ್ಮದಿಯಾಗಿ ಬದುಕಲು ವಿಕಸಿತಾ ಭಾರತ ಸಂಕಲ್ಪದ ಮಾಹಿತಿ ನಾವೆಲ್ಲರೂ ಪಡೆಯಬೇಕು, ಎಲ್ಲಾ ಅಧಿಕಾರಿಗಳು ಕಾಪು ಕ್ಷೇತ್ರದ ಶಾಸಕನಾಗಿ ನಾನು ನಿಮ್ಮ ಜೊತೆಗೆ ಶ್ರಮಿಸುವೆ, ನೀವು ಮತ ಹಾಕಿ ಜವಾಬ್ದಾರಿ ಕೊಟ್ಟ ದ್ದಕ್ಕೆ ಸೇವೆ ಮಾಡುವೆ ಪ್ರತಿ ದಿನ ನೂರಾರು ಜನರು ಸಮಸ್ಯೆಯಿಂದ ನನ್ನ ಬಳಿ ಬರುವಾಗ ನನಗೆ ಅರ್ಥ ವಾಗುತ್ತದೆ ನಿಮ್ಮ ಜೊತೆ ಸದಾ ಸೇವಾ ಕನಾಗಿ ಇರುತ್ತೇನೆ ಎಂದು ಇನ್ನಂಜೆ ಪಂಚಾಯತ್ ನಲ್ಲಿ ನಡೆದ ಭಾರತ ವಿಕಾಸ್ ಸಂಕಲ್ಪ ಕಾರ್ಯಕ್ರಮದಲ್ಲಿ ಕಾಪು ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷರು ಪಂಚಾಯತ್ ಅಧ್ಯಕ್ಷರು ಆದ ಮಾಲಿನಿ ಶೆಟ್ಟಿ ಮಾತಿಗಿಂತ ಕೃತಿ ಮುಖ್ಯ ನೀವು ಕೆಲಸ ಹೇಳಿ,ಪಂಚಾಯತ್ ನ್ನು ಉಪಯೋಗಿಸಿಕೊಳ್ಳಿ ನಾವು ನಿಮ್ಮ ಜೊತೆಗೆ ಸದಾ ಕೆಲಸ ಮಾಡುತ್ತೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕು.ಚಂದ್ರಕಲಾ ಮತ್ತು ಮಾಹಿತಿ ನೀಡಲು ಬಂದಿರುವ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಪಂಚಾಯತ್ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.