Recent Posts

Monday, January 20, 2025
ಉಡುಪಿಸುದ್ದಿ

ಉಡುಪಿ ಜಿಲ್ಲಾ ಘಟಕದಿಂದ ಕರ್ನಾಟಕ ರಕ್ಷಣಾ ವೇದಿಕೆಯ ಸಮಾಲೋಚನಾ ಸಭೆ – ಕಹಳೆ ನ್ಯೂಸ್

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದಿಂದ ಸಮಾಲೋಚನಾ ಸಭೆಯು ಇಂದು ಕಾರ್ತಿಕ್ ಎಸ್ಟೇಟ್ ನ ಮಿನಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅ ರಾ ಪ್ರಭಾಕರ ರಾಜ್ ಪೂಜಾರಿ ವಹಿಸಿಕೊಂಡು 20 ಕ್ಕೂ ಹೆಚ್ಚು ನೂತನ ಕಾರ್ಯಕರ್ತರನ್ನು ಸೇರ್ಪಡೆಗೊಳಿಸಿ ಶುಭ ಹಾರೈಸಿದರು. ಉ.ಕ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಅನ್ಸರ್ ಅಹಮ್ಮದ್ ಮಾತನಾಡಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಟಗೊಳಿಸಿ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡೋಣ ಎಂದು ನೂತನ ತಂಡಕ್ಕೆ ಶುಭಾಶಯವನ್ನಿತ್ತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಘದ ಪ್ರಮುಖರಾದ ಸೋಮಪ್ಪ ತಿಂಗಳಾಯ, ಪ್ರಕಾಶ್ ಸಜ್ಜನ್, ರತ್ನಾಕರ ಮೊಗವೀರ ಮತ್ತು ಮಮತಾ ಹರೀಶ್ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂಧರ್ಬದಲ್ಲಿ ಬ್ರಹ್ಮಾವರ ಮಹಿಳಾ ಉಸ್ತುವಾರಿಯಾಗಿ ಆಯ್ಕೆಯಾದ ಅಕ್ಷಯ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಚಾಲಕರುಗಳಾದ ಜಯ ಪೂಜಾರಿ, ಕುಶಾಲ್ ಅಮೀನ್ ಬೆಂಗ್ರೆ,ಜಯ ಸಾಲ್ಯಾನ್,ನಿಜಾಮುದ್ದೀನ್,ಸುಧೀರ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಘದ ಪ್ರಮುಖರಾದ ರೋಷನ್ ಬಂಗೇರ, ಆನಂದ್ ಶೆಟ್ಟಿ,ಅಶ್ವಿನಿ ಕಿರಣ್, ಸರಿತಾ ಶೆಟ್ಟಿಗಾರ್, ಕೃಷ್ಣ ಕುಂದರ್, ಸುಧಾಕರ್ ಕಲ್ಮಾಡಿ ಮತ್ತು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕರವೇ ಮುಖಂಡ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.